ಇತ್ತೀಚೆಗೆ ಕಾಡು ಮೇಕೆಗಳ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ರಂಜಿಸಿದೆ.
ವೈರಲ್ ಆದ ವಿಡಿಯೋದಲ್ಲಿ, ಆಲ್ಪೈನ್ ಐಬೆಕ್ಸ್ ಜಾತಿಯ ಹಲವು ಮೇಕೆಗಳು ಅಣೆಕಟ್ಟಿನ ಕಡಿದಾದ ಗೋಡೆಯನ್ನು ಸರಸರನೆ ಹತ್ತುವುದನ್ನು ಕಾಣಬಹುದು.
ಅಣೆಕಟ್ಟಿನ ನೂರು ಅಡಿ ಎತ್ತರದ ಗೋಡೆಯನ್ನು ಏರಲು ಪ್ರಯತ್ನಿಸುತ್ತಿರುವ ಈ ಮೇಕೆಗಳು ವಿಶಿಷ್ಟವಾದ ಹತ್ತುವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತುಪಡಿಸಿವೆ.
ವಿಡಿಯೋದಲ್ಲಿ ಮೊದಲು ಅವು ಗೋಡೆಯ ಮೇಲೆ ನಿಂತಿರುವಂತೆ ತೋರುತ್ತದೆ, ಆದರೆ ಅಣೆಕಟ್ಟಿನ ಏರಿಯಲ್ ವ್ಯೂ ಪ್ರಸ್ತುತಪಡಿಸಿದ ತಕ್ಷಣ ಮೇಕೆಗಳ ಸಾಹಸ ಅರಿವಾಗುತ್ತದೆ. ಅವು ಅನಾಯಾಸವಾಗಿ ಅಣೆಕಟ್ಟನ್ನು ಅಲೆಯುವುದು ನೋಡುವುದು ಖಂಡಿತವಾಗಿಯೂ ಕೆಲವರಲ್ಲಾದರೂ ಸಾಹಸ ಮನೋಭಾವ ಪ್ರಚೋದಿಸುತ್ತದೆ.
ಕಡಿದಾದ ಗೋಡೆಗಳನ್ನು ಏರಲು ಮನುಷ್ಯರಿಗೆ ಸಲಕರಣೆಗಳ ಅಗತ್ಯವಿದ್ದರೂ, ಮೇಕೆಗಳು ಅದನ್ನು ಅತ್ಯಂತ ಸುಲಭವಾಗಿ ಹತ್ತುವುದನ್ನು ನೋಡಿದರೆ ಎಂತವರಿಗೂ ಆಶ್ಚರ್ಯ ತರುತ್ತದೆ.
ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದು, ಒಬ್ಬರು “ಭೌತಶಾಸ್ತ್ರದ ನಿಯಮಗಳು ಅವುಗಳಿಗೆ ಅನ್ವಯಿಸುವುದಿಲ್ಲ. ಅದನ್ನು ಶಾಲೆಯಲ್ಲಿ ಕಲಿಸಬೇಕು ಎಂದು ನಾನು ಭಾವಿಸಿದ್ದೆ” ಎಂದಿದ್ದಾರೆ.
https://twitter.com/TheFigen/status/1556316849826140162?ref_src=twsrc%5Etfw%7Ctwcamp%5Etweetembed%7Ctwterm%5E1556316849826140162%7Ctwgr%5E6b7e11f7d6c85af6c2c7960d0d7de7e0487cfec5%7Ctwcon%5Es1_&ref_url=https%3A
https://twitter.com/1611BhuvanKaya/status/1556317248456835079?ref_src=twsrc%5Etfw%7Ctwcamp%5Etweetembed%7Ctwterm%5E1556317248456835079%7Ctwgr%5E6b7e11f7d6c85af6c2c7960d0d7de7e0487cfec5%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fmountain-goats-climbing-a-dam-wall-challenges-newtons-rule-of-gravity-5719327.html
https://twitter.com/TheFigen/status/1556316849826140162?ref_src=twsrc%5Etfw%7Ctwcamp%5Etweetembed%7Ctwterm%5E1556334212470431744%7Ctwgr%5E6b7e11f7d6c85af6c2c7960d0d7de7e0487cfec5%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fmountain-goats-climbing-a-dam-wall-challenges-newtons-rule-of-gravity-5719327.html