ನವದೆಹಲಿ : ಮೊಟೊರೊಲಾ ಮೊಬಿಲಿಟಿ ಇಂಡಿಯಾ ತನ್ನ ಮೊಬೈಲ್ ಬಿಸಿನೆಸ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಟಿ.ಎಂ.ನರಸಿಂಹನ್ ಅವರನ್ನು ನೇಮಕ ಮಾಡಿದೆ.
ಮೊಟೊರೊಲಾದ ಏಷ್ಯಾ ಪೆಸಿಫಿಕ್ ವ್ಯವಹಾರದ ಮುಖ್ಯಸ್ಥರಾಗಿ ಮುಂದುವರಿಯಲಿರುವ ಪ್ರಶಾಂತ್ ಮಣಿ ಅವರಿಗೆ ವರದಿ ಮಾಡುವ ಮೂಲಕ ನರಸಿಂಹನ್ ಭಾರತದ ವ್ಯವಹಾರವನ್ನು ಮುನ್ನಡೆಸಲಿದ್ದಾರೆ.
ನರಸಿಂಹನ್ ಈ ಹಿಂದೆ ಪೆಪ್ಸಿಕೋ, ಬ್ರಿಟಾನಿಯಾ ಮತ್ತು ಸ್ಯಾಮ್ಸಂಗ್ನಂತಹ ಕಂಪನಿಗಳಲ್ಲಿ ಲೀಡರ್ ಆಗಿ ಕೆಲಸ ಮಾಡಿದ್ದಾರೆ.ವ್ಯವಹಾರವನ್ನು ಇನ್ನೂ ಹೆಚ್ಚಿನ ಯಶಸ್ಸಿಗೆ ಏರಿಸುವಲ್ಲಿ ನರಸಿಂಹನ್ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದು ಮೊಟೊರೊಲಾ ಏಷ್ಯಾ ಪೆಸಿಫಿಕ್ ಕಾರ್ಯನಿರ್ವಾಹಕ ನಿರ್ದೇಶಕ ಮಣಿ ಹೇಳಿದರು.