ಬೆಂಗಳೂರು : ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಿದ್ರೆ ಮನೆ ಬಾಗಿಲಿಗೆ ಫೋಟೋ ಸಮೇತ ನೋಟಿಸ್ ನೀಡಲಿದೆ.
ಸಂಚಾರ ಸುರಕ್ಷತೆ ಹಾಗೂ ಸುವ್ಯವಸ್ಥೆಯ ಉದ್ದೇಶದಿಂದ ಸಂಚಾರ ಕರ್ತವ್ಯಕ್ಕೆ ನಿಯೋಜನೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಸಾರ್ವಜನಿಕ ರಸ್ತೆಗಳಲ್ಲಿ ಮೋಟಾ ವಾಹನ ಕಾಯಿದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿ/ವಾಹನದ ಮಾಲೀಕರ ಫೋಟೋಗಳನ್ನು ಸಂಗ್ರಹಿಸಿ ಎನ್‌ರ್ಸ್‌ಮೆಂಟ್ ಆಟೋಮೇಶನ್ ಸೆಂಟರ್, ಸಂಚಾರ ಪೊಲೀಸ್ ಠಾಣೆ ಮೂಲಕ ಸದರಿ ಉಲ್ಲಂಘನೆ ಮಾಡಿದ ವ್ಯಕ್ತಿ ಅಥವಾ ಮಾಲೀಕರ ವಿರುದ್ಧ ಮೋಟಾರ್ ವಾಹನ ಕಾಯಿದೆ ಅಡಿಯಲ್ಲಿ ಸಂಬಂಧಪಟ್ಟ ವಾಹನ ಮಾಲೀಕರ ಮನೆಯ ವಿಳಾಸಕ್ಕೆ ಪೊಲೀಸ್ ನೊಟೀಸ್ ಕಳುಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಸಾರ್ವಜನಿಕರು ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ಪೊಲೀಸ್ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಸದರಿ ಕಾರ್ಯನಿರ್ವಹಣೆ ವ್ಯವಸ್ಥೆಯಿಂದ ಮೋಟಾರ್ ವಾಹನ ಕಾಯಿದೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ವ್ಯಕ್ತಿಗಳ ವಿರುದ್ಧ ವಾಹನಗಳನ್ನು ತಡೆಯದೇ ಸುಲಭವಾಗಿ ಕಾನೂನು ಕ್ರಮ ಕೈಗೊಳ್ಳಲು ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಮಾಡುವ ಅಡ್ಡಾದಿಡ್ಡಿಯಾಗಿ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವ, ಮೊಬೈಲ್ ಬಳಸಿ ವಾಹನ ಚಲಾಯಿಸುವ, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಮುಂತಾದ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ವಾಹನವು ಸಾರಿಗೆ ಇಲಾಖೆಯ ದಾಖಲೆಗಳಲ್ಲಿ ನಿಮ್ಮ ಹೆಸರಿನಲ್ಲಿ ನೊಂದಣಿಯಾಗಿದ್ದು, ವಾಹನದ ಈ ಚಾಲಕ ಮುಂದಿನ ಪುಟದಲ್ಲಿ ನಮೂದಿಸಿರುವ ಉಲ್ಲಂಘನೆಗಳನ್ನು ಮಾಡಿದ ಬಗ್ಗೆ ವರದಿಯಾಗಿದೆ. ಮೋಟಾರು ವಾಹನ ಕಾಯ್ದೆ 1988 ಕಲಂ: 133ರ ಪ್ರಕಾರ ಆರೋಪಿಸಲಾದ ಉಲ್ಲಂಘನೆಗಳನ್ನು ಎಸಗಿದ ಮತ್ತುಉಲ್ಲೇಖಿತ ವಾಹನವನ್ನು ಚಾಲನೆ ಮಾಡುತ್ತಿದ್ದ ಚಾಲಕನ ಹೆಸರು, ವಿಳಾಸ, ಚಾಲಕನ ಪರವಾನಿಗೆ ಪತ್ರದ ಬಗ್ಗೆ ಈ ನೋಟೀಸ್ ತಲುಪಿದ 7 ದಿನಗಳ ಒಳಗಾಗಿ ಮಾಹಿತಿಒದಗಿಸುವುದು.
ಮಾಲೀಕ ಚಾಲಕರು ಈ ನಮೂದಿಸಿರುವ ದಂಡ ಪಾವತಿ ಕೇಂದ್ರಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಮಾಹಿತಿಒದಗಿಸಲು ವಿಫಲವಾದಲ್ಲಿ ಮೋಟಾರು ವಾಹನ ಕಾಯ್ದೆ 1988 ರ ಕಲಂ: 187 ರನ್ವಯ ಮೂರು ತಿಂಗಳವರೆಗೆ ಕಾರಾಗೃಹ ಅಥವಾಉಲ್ಲಂಘನೆಗೆ ನಿಗದಿ ವಾಸ ಪಡಿಸಿದ ದಂಡಅಥವಾಎರಡರಿಂದಲೂ ಶಿಕ್ಷಿಸಲ್ಪಡಬಹುದಾದ ಶಿಕ್ಷಾರ್ಹ ಅಪರಾಧವಾಗುತ್ತದೆ.