ಇನ್ಮುಂದೆ ವಾಹನ ಸವಾರರು ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಗಾಡಿ ಬೇಕಾಬಿಟ್ಟಿ ಗಾಡಿ ಓಡಿಸಿದ್ರೆ ಬೀಳುತ್ತೆ 10 ಸಾವಿರ ದಂಡ…! ಹೌದು, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆ ತುರ್ತು ವಾಹನಗಳಿಗೆ ನೀವು ದಾರಿ ಬಿಡಬೇಕು, ಇಲ್ಲವಾದಲ್ಲಿ ಸಂಚಾರಿ ಪೊಲೀಸರು ನಿಮಗೆ 10 ಸಾವಿರ ದಂಡ ಹಾಕಲಿದ್ದಾರೆ.
ಗುರುಗ್ರಾಮ ಸಂಚಾರ ಪೊಲೀಸ್ ವಲಯದ ಅಧಿಕಾರಿಗಳು ಈ ನಿಯಮ ಕೈಗೊಂಡಿದ್ದು, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆ ತುರ್ತು ವಾಹನಗಳಿಗೆ ನೀವು ದಾರಿ ಬಿಡಬೇಕು, ಇಲ್ಲವಾದಲ್ಲಿ ಪೊಲೀಸರು 10 ಸಾವಿರ ದಂಡ ವಿಧಿಸಲಿದ್ದಾರೆ. ರೋಗಿಗೆ ಪ್ರತಿಯೊಂದು ನಿಮಿಷವೂ ನಿರ್ಣಾಯಕವಾಗಿರುತ್ತದೆ, ಆದ್ದರಿಂದ ಈ ನಿಯಮಗಳನ್ನು ತಂದಿದ್ದೇವೆ ಎಂದು ಡಿಸಿಪಿ (ಸಂಚಾರ) ವೀರೇಂದ್ರ ವಿಜ್ ಹೇಳಿದ್ದಾರೆ.
ಎಲ್ಲಾ ನಗರಗಳಲ್ಲಿಯೂ ಇಂತಹ ಕಾನೂನು ಬರಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ. ಅಪಾಯದ ಅಂಚಿನಲ್ಲಿರುವ ರೋಗಿಗಳನ್ನು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸುವುದು ಕಷ್ಟದ ಕೆಲಸ ಎಂದು ಆಂಬುಲೆನ್ಸ್ ಡ್ರೈವರ್ ಗಳು ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.