ಬೆಂಗಳೂರು : ವಾಹನ ಸವಾರರೇ ಗಮನಿಸಿ , ನೀವಿನ್ನೂ ‘HSRP’ ನಂಬರ್ ಪ್ಲೇಟ್ ಹಾಕಿಸಿಲ್ವಾ.. ನ.30 ರೊಳಗೆ ನಂಬರ್ ಪ್ಲೇಟ್ ಹಾಕಿಸಿ…ದಂಡದಿಂದ ಪಾರಾಗಿ.ಹೌದು. ವಾಹನ ಸವಾರರಿಗೆ ಹೆಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ನ.30 ರವರೆಗೆ ವಿಸ್ತರಣೆ ಮಾಡಿದೆ. ನ.30 ರೊಳಗೆ ತಪ್ಪದೇ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು, ಇಲ್ಲದಿದ್ರೆ ದಂಡ ಬೀಳುವುದು ಗ್ಯಾರೆಂಟಿ.
ಹಳೆ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ ಹೆಚ್ಎಸ್ಆರ್ಪಿಗಳ ಅಳವಡಿಕೆ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಮಾಡಲಾಗಿದೆ.
2019ರ ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬಹುದು.https://transport.karnataka.gov.in/english ಆನ್ಲೈನ್ ಮೂಲಕವೂ ನೋಂದಣಿಗೆ ಅವಕಾಶ ನೀಡಲಾಗಿದೆ.
2019ರ ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕು, ನೀವು HSRP ನಂಬರ್ ಪ್ಲೇಟ್ ಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್ಎಸ್ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.ಈಗಾಗಲೇ 4 ಬಾರಿ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದ್ದು, ಮತ್ತೊಮ್ಮೆ ನವೆಂಬರ್ 30ರವರೆಗೆ ಹೊಸ ಗಡುವು ನಿಗದಿ ಮಾಡಲಾಗಿದೆ. ನಂತರ ದಂಡ ಪ್ರಯೋಗಿಸಲಾಗುವುದು ಎನ್ನಲಾಗಿದೆ.