ವೀರೇಶ್ ಬೊಮ್ಮಸಾಗರ್ ನಿರ್ದೇಶನದ ಚಂದನ್ ರಾಜ್ ಅಭಿನಯದ ರಾಜರತ್ನಾಕರ ಚಿತ್ರದ ಮೋಷನ್ ಪೋಸ್ಟರ್ youtube ನಲ್ಲಿ ರಿಲೀಸ್ ಆಗಿದೆ. ಚಂದನ್ ರಾಜ್ ಅವರ ಖಡಕ್ ಲುಕ್ ನ ಈ ಮೋಶನ್ ಪೋಸ್ಟರ್ ಗೆ ನೋಡುಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿದ್ದು ಫಿದಾ ಆಗಿದ್ದಾರೆ.
ಈ ಚಿತ್ರವನ್ನು ಚೌಮುದಾ ಫಿಲಂಸ್ ಬ್ಯಾನರ್ ನಲ್ಲಿ ಜಯರಾಮ್ ಸಿ ನಿರ್ಮಾಣ ಮಾಡಿದ್ದು, ಚಂದನ್ ರಾಜ್ ಸೇರಿದಂತೆ ಅಪ್ಸರಾ, ಯಮುನಾಶ್ರೀನಿಧಿ, ಚೇತನ್ ದುರ್ಗಾ, ಡಿಂಗ್ರಿ ನರೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಶಾಂತಕುಮಾರ್ ಸಂಕಲನ ಹಾಗೂ ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ.