
ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆ. ರಾಘವ್ ನಿರ್ದೇಶನದ ‘ರಣಾಕ್ಷ’ ಚಿತ್ರದ ಮೋಷನ್ ಪೋಸ್ಟರ್ ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಮೋಶನ್ ಪೋಸ್ಟರ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ಕಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆ ವಿ ಆರ್ ಪಿಚ್ಚರ್ ಬ್ಯಾನರ್ ನಡಿ ಎಚ್.ಎಸ್. ರಾಮು ಮತ್ತು ಶ್ರೀಮತಿ ಶೋಭಾ ಶಿವಾಜಿರಾವ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸೀರುಂಡೆ ರಘು ಸೇರಿದಂತೆ ರಕ್ಷಾ ಹನುಮಂತು, ಅಪೂರ್ವ, ಮುನಿರಾಜು ಪ್ರಮುಖ ಪಾತ್ರದಲ್ಲಿದ್ದಾರೆ.
ವಿಶಾಲ್ ಆಲಾಪ್ ಸಂಗೀತ ಸಂಯೋಜನೆ ನೀಡಿದ್ದು, ಧನುಷ್ ಎಲ್ ಸಂಕಲನ ಮತ್ತು ದೀಪ ಕುಮಾರ್ ಛಾಯಾಗ್ರಹಣವಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.