ಡರ್ಬನ್: ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗುವನ್ನು ರಕ್ಷಿಸಲು ಮಹಡಿಯ ಮೇಲಿನಿಂದ ಕೆಳಕ್ಕೆ ಎಸೆದಿರುವ ಮನಕಲಕುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಮನೆಯು ಹೊತ್ತಿ ಉರಿಯುತ್ತಿದ್ದರಿಂದ ದಟ್ಟವಾದ ಹೊಗೆ ಆವರಿಸಿತ್ತು. ಈ ವೇಳೆ ಏನು ಮಾಡಬೇಕೆಂದು ತೋಚದ ಮಹಿಳೆಯು ಕೆಳಗೆ ಕಾಯುತ್ತಿದ್ದ ನೆರೆಹೊರೆಯವರ ಕೈಗೆ ಮೊದಲ ಅಂತಸ್ತಿನಿಂದ ತನ್ನ ಮಗುವನ್ನು ಕೆಳಕ್ಕೆ ಎಸೆದಿದ್ದಾಳೆ. ಕೂಡಲೇ ಅಲ್ಲಿದ್ದ ಜನರು ಮಗುವನ್ನು ಹಿಡಿದುಕೊಂಡಿದ್ದಾರೆ. ಮಗುವಿಗೆ ಯಾವುದೇ ರೀತಿಯ ನೋವಾಗದಂತೆ ರಕ್ಷಿಸಿದ್ದಾರೆ.
PF ಖಾತೆದಾರರಿಗೆ ಖುಷಿ ಸುದ್ದಿ: ಮನೆಯಲ್ಲೇ ಕುಳಿತು ಮಾಡ್ಬಹುದು ಈ ಕೆಲಸ
ಈ ಘಟನೆಯ ದೃಶ್ಯವನ್ನು ಕ್ಯಾಮರಾಮೆನ್ ಥುತುಕಾ ಜೊಂಡಿ ಚಿತ್ರೀಕರಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಮಹಿಳೆ, ‘’ಕೆಳಗೆ ನಿಂತಿದ್ದ ಜನರು ಮಗು ಎಸೆಯಲು ಹೇಳಿದರು. ನಾನು ಭೀತಿಗೊಂಡಿದ್ದೆ. ನನ್ನ ಮಗುವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ಒಂದು ಕ್ಷಣ ತನ್ನ ಮಗಳನ್ನು ಕೆಳಗಿದ್ದ ಜನರು ಹಿಡಿದಿದ್ದಾರೋ ಇಲ್ಲವೋ ಎಂಬ ಬಗ್ಗೆ ಭಯವಾಗಿತ್ತು’’ ಎಂದು ವಿವರಿಸಿದ್ದಾಳೆ. ಕೆಲವೇ ಹೊತ್ತಿನಲ್ಲಿ ಈಕೆ ಕೂಡ ಕಟ್ಟಡದಿಂದ ರಕ್ಷಣೆ ಪಡೆದು ಮಗುವನ್ನು ಸೇರಿಕೊಂಡಿದ್ದಾಳೆ.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಅವರ ಬೆಂಬಲಿಗರು ಗಲಭೆ ಎಬ್ಬಿಸಿದ್ದಾರೆ. ಆ ಗಲಭೆಯೀಗ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರ ಹಿಂಸಾಚಾರ ತಡೆಯಲು ಪೊಲೀಸರು, ಸೇನಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ಈ ಹಿಂಸಾಚಾರದಲ್ಲಿ 72 ಮಂದಿ ಮೃತಪಟ್ಟಿದ್ದು, ಸಾರ್ವಜನಿಕ ಹಿಂಸಾಚಾರ ಕಾಯ್ದೆಯಡಿ 1,234 ಮಂದಿಯನ್ನು ಬಂಧಿಸಲಾಗಿದೆ.