alex Certify ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ ಲೇಡಿ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ ಲೇಡಿ ಪೊಲೀಸ್

ಮುಂಬೈ: ರಹೇನಾ ಶೇಖ್ ಬಾಗ್ವಾನ್ ಎಂಬ ಮಹಿಳಾ ಪೊಲೀಸ್ ಮಾಡಿರುವ ಉತ್ತಮ ಕಾರ್ಯಕ್ಕಾಗಿ ಮುಂಬೈನ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ಗೌರವಿಸಿದ್ದಾರೆ.

ರಹೇನಾ ಶೇಖ್ ಬಾಗ್ವಾನ್ ಅವರು ರಾಯಘಡದ 50 ಬುಡಕಟ್ಟು ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದಾರೆ. ಇದರ ಜೊತೆಗೆ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚಿದ್ದಾರೆ. ಹೀಗಾಗಿ ಜನ ಇವರನ್ನು ಮದರ್ ಥೆರೆಸಾ ಎಂದು ಕರೆಯುತ್ತಿದ್ದಾರೆ.

ರಹೇನಾ ಅವರು 2000 ದಲ್ಲಿ ಪೊಲೀಸ್ ಪೇದೆಯಾಗಿ ಸೇವೆಗೆ ನಿಯುಕ್ತಿಗೊಂಡಿದ್ದರು. ಕಳೆದ ವರ್ಷ ತಮ್ಮ ಮಗಳ ಹುಟ್ಟುಹಬ್ಬವನ್ನು ಜ್ಞಾನಿ ವಿದ್ಯಾಲಯದಲ್ಲಿ ಆಚರಿಸಲು ನಿರ್ಧರಿಸಿ ಪ್ರಾಂಶುಪಾಲರ ಜತೆ ಮಾತನಾಡಿದ್ದರು. ಇಲ್ಲಿನ ಬಹುತೇಕ ಮಕ್ಕಳು ಅತ್ಯಂತ ಬಡತನದ ಹಿನ್ನೆಲೆಯುಳ್ಳವರಾಗಿದ್ದರು. ಪುತ್ರಿಯ ಜನ್ಮದಿನ ಹಾಗೂ ಈದ್ ಶಾಪಿಂಗ್ ಗೆ ಉಳಿಸಿದ ಹಣದಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದಾಗಿ ಈ ವೇಳೆ ಹೇಳಿಕೊಂಡರು.

SBI ಅಪ್ರೆಂಟಿಸ್ ನೇಮಕಾತಿ – 2020 ರದ್ದು, ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಾಪಸ್, 2021 ರ ನೇಮಕಾತಿಗೆ ಅರ್ಜಿ

ಇನ್ನು ‘’ಪ್ರಾಂಶುಪಾಲರು ಶಾಲಾ ವಿದ್ಯಾರ್ಥಿಗಳಿಗೆ ಹಣ ಕಳುಹಿಸುವ ಬದಲು, ಶಾಲೆಗೆ ಭೇಟಿ ನೀಡಬೇಕಾಗಿ ವಿನಂತಿಸಿದರು. ನಿಗದಿತ ದಿನದಂದು ನಾವು ಶಾಲೆಗೆ ಭೇಟಿ ನೀಡಿದೆವು. ಈ ವೇಳೆ ವಿದ್ಯಾರ್ಥಿಗಳಲ್ಲಿ ಕಂಡು ಬಂದ ಶಿಸ್ತು ನೋಡಿ ಆಶ್ಚರ್ಯವಾಯಿತು. ಅವರೆಲ್ಲಾ ಮಾಸ್ಕ್ ಧರಿಸಿದ್ದರು ಮತ್ತು ಕೋವಿಡ್ ನಿಯಮವನ್ನು ಅನುಸರಿಸಿದ್ದರು. ಹಾಗೂ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದರು’’ ಎಂದು ರಹೇನಾ ಹೇಳಿದರು.

‘’ಸಹಾಯ ಮಾಡುವುದರಲ್ಲಿ ನನಗೆ ಅಪಾರ ಸಂತೋಷ ಮತ್ತು ತೃಪ್ತಿ ನೀಡಿದೆ. ನಾನು ಪ್ರತಿಯೊಬ್ಬರನ್ನೂ ಯಶಸ್ವಿ ಪ್ರಜೆಗಳಾಗಿ ನೋಡಲು ಬಯಸುತ್ತೇನೆ. ಶಿಕ್ಷಣವು ಬದಲಾವಣೆಯ ಪ್ರಮುಖ ಅಂಶವಾಗಿದೆ. ರೆಮಿಡಿಸಿವರ್, ಆಸ್ಪತ್ರೆ, ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ ಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಿದ್ದಕ್ಕೆ ತೃಪ್ತಿಯಿದೆ’’ ಎಂದು ತಿಳಿಸಿದರು.

ಕಷ್ಟದಲ್ಲಿ ಇರುವವರಿಗೆ ರಹೇನಾ ಸಹಾಯಹಸ್ತ ಚಾಚಿದ್ದಾರೆ. ಜನರಿಗೆ ಇವರಂತಹವರು ಬೇಕಾಗಿದ್ದಾರೆ ಎಂಬುದು ಜನಸಾಮಾನ್ಯರ ಅಂಬೋಣ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...