ವಿಜಯಪುರ: ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನಾಲ್ವರು ಮಕ್ಕಳನ್ನು ಎಸೆದು ಬಳಿಕ ತಾಯಿ ತಾನೂ ಕಾಲುಗೆ ಹಾರಿದ್ದಾಳೆ. ಕಾಲುವೆ ನೀರಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಎಸೆದು ಕಾಲುಗೆ ಹಾರಿದ್ದ ತಾಯಿಯನ್ನು ರಕ್ಷಿಸಲಾಗಿದೆ.
ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹುಸೇನ್ ನಿಂಗರಾಜ ಭಜಂತ್ರಿ (2) ಹಾಗೂ 13 ತಿಂಗಳ ಕಂದಮ್ಮ ಮೃತ ಮಕ್ಕಳು. ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಮ್ಮಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತ ಮಕ್ಕಳು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದವರು ಎಂದು ತಿಳಿದುಬಂದಿದೆ.