ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಶಕ್ತಿ, ಧೈರ್ಯ, ಪ್ರೀತಿ ಮತ್ತು ಸಹಾನುಭೂತಿ ಅಗತ್ಯವಿರುತ್ತದೆ. ರೋಗಿಗೆ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರಿಗೂ ಸಹ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ತಾಯಿಯನ್ನು ಬೆಂಬಲಿಸಲು ಕ್ಷೌರಿಕನೊಬ್ಬ ತನ್ನ ತಲೆ ಬೋಳಿಸಿಕೊಳ್ಳುವ ಹೃದಯಸ್ಪರ್ಶಿ ವಿಡಿಯೋವೊಂದು ನೆಟ್ಟಿಗರು ಕಣ್ಣೀರು ಹಾಕುವಂತೆ ಮಾಡಿದೆ.
ತಾಯಿಯ ನೋವಿಗೆ ಮರುಗಿದ ಮಗ ಸಹ ತನ್ನ ತಲೆ ಕೂದಲು ತೆಗೆಸಿಕೊಂಡ ಕಾರ್ಯಕ್ಕೆ ಆತನ ಸಹೋದ್ಯೋಗಿಗಳು ಸಹ ಜೊತೆಯಾಗಿದ್ದಾರೆ. ವೈರಲ್ ಕ್ಲಿಪ್ ಅನ್ನು Guilherme Magalhaes ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಲೂನ್ನಲ್ಲಿ ಕ್ಷೌರಿಕನಾಗಿ ಕೆಲಸ ಮಾಡುವ ತನ್ನ ಮಗ ಗಿಲ್ಹೆರ್ಮ್ನಿಂದ ಕುರ್ಚಿಯಲ್ಲಿ ಕುಳಿತಿರುವ ಮಹಿಳೆ ತನ್ನ ತಲೆ ಬೋಳಿಸಿಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ.
ವೀಡಿಯೊದಲ್ಲಿ ಕೆಲವು ಸೆಕೆಂಡುಗಳಲ್ಲಿ ಗಿಲ್ಹೆರ್ಮ್ ತನ್ನ ತಾಯಿಯನ್ನು ಬೆಂಬಲಿಸಲು ತನ್ನ ತಲೆಯನ್ನು ಬೋಳಿಸಿಕೊಳ್ಳಲು ಪ್ರಾರಂಭಿಸುತ್ತಾನೆ.
ಗಿಲ್ಹೆರ್ಮ್ ಅವರ ಸಹೋದ್ಯೋಗಿಗಳು ಅವನು ಏನು ಮಾಡುತ್ತಿದ್ದಾನೆಂದು ಗಮನಿಸಿ, ನಂತರ ತಮ್ಮ ತಲೆಗೂದಲನ್ನೂ ಸಹ ತೆಗೆಯುವಂತೆ ಕೇಳುತ್ತಾರೆ.
ಗಿಲ್ಹೆರ್ಮೆಯ ತಾಯಿ ತನ್ನ ಮಗ ಮತ್ತು ಅವನ ಸಹೋದ್ಯೋಗಿಗಳು ಮಾಡಿದ ಕಾರ್ಯದಿಂದ ಭಾವಪರವಶರಾಗಿ ಕಣ್ಣೀರು ಹಾಕುತ್ತಾರೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣ ಬಳಕೆದಾರರು ಗಿಲ್ಹೆರ್ಮ್ ಮತ್ತು ಅವರ ಸಹೋದ್ಯೋಗಿಗಳನ್ನು ಅಮೂಲ್ಯವಾದ ಪ್ರತಿಕ್ರಿಯೆಗಾಗಿ ಹೊಗಳಿದ್ದಾರೆ.
https://www.youtube.com/watch?v=6GJhYsDgH8U