ಕಸದ ತೊಟ್ಟಿಯಲ್ಲಿ ವಸ್ತುಗಳನ್ನು ಹುಡುಕಿ ಮಾರಾಟ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆಯ ವಾರದ ಸಂಪಾದನೆ ಕೇಳಿದರೆ ನಿಮಗೆ ಆಶ್ಚರ್ಯವಾಗೋದು ಖಂಡಿತ. ಅಷ್ಟಕ್ಕೂ ಆ ಮಹಿಳೆ ಮಾಡೋದೇನು ಗೊತ್ತಾ..?
ತನ್ನ ಪೂರ್ಣಾವಧಿಯ ಕೆಲಸ ತೊರೆದು ಡಂಪ್‌ಸ್ಟರ್ ಡೈವರ್ (ಕಸದ ರಾಶಿಯಲ್ಲಿ ಮೌಲ್ಯದ ವಸ್ತುಗಳನ್ನು ಹುಡುಕುವುದು) ಆದ ಮಹಿಳೆಯೊಬ್ಬಳು ವಾರಕ್ಕೆ $ 1000 (73,000 ರೂ.) ಗಿಂತ ಹೆಚ್ಚು ಸಂಪಾದಿಸುತ್ತಿದ್ದಾಳೆ. 32 ವರ್ಷದ ಟಿಫಾನಿ ಶೆರಿ ಡಂಪ್‌ಸ್ಟರ್ ಡೈವರ್ ಆದ ಮಹಿಳೆ. ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆಗೆ ಹೆಚ್ಚಿನ ಜವಾಬ್ದಾರಿ ಇದೆ.
ಕಸದ ಬುಟ್ಟಿಯಲ್ಲಿ ಬಿಸಾಡಿದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣವನ್ನು ಗಳಿಸಬಹುದು ಅನ್ನೋದನ್ನು ಅರಿತುಕೊಂಡಳು. ಹೀಗಾಗಿ ಕ್ಯಾಂಟೀನ್ ಸರ್ವರ್ ಆಗಿದ್ದ ಈಕೆ ಇದ್ದಕ್ಕಿದ್ದಂತೆ ಕೆಲಸ ತೊರೆಯಲು ನಿರ್ಧರಿಸಿ, ಡಂಪ್‌ಸ್ಟರ್ ಡೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಳು. ಇದೀಗ ವಾರಕ್ಕೆ $ 1000ದ ವರೆಗೂ ಈಕೆ ಹಣ ಗಳಿಕೆ ಮಾಡುತ್ತಿದ್ದಾಳೆ.
ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಸಿಇಟಿ: ಭೌತಶಾಸ್ತ್ರ ಪರೀಕ್ಷೆಗೆ ಶೇ. 95.91, ರಸಾಯನಶಾಸ್ತ್ರಕ್ಕೆ ಶೇ. 95.88 ಅಭ್ಯರ್ಥಿಗಳು ಹಾಜರಿ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 2017ರಲ್ಲಿ ಕಸದ ಬುಟ್ಟಿಯಲ್ಲಿ ಬೆಲೆಬಾಳುವ ಉತ್ಪನ್ನಗಳನ್ನು ಕಂಡುಕೊಂಡ ನಂತರ ಟಿಫಾನಿ ಈ ಕೆಲಸ ಮಾಡಲು ಮುಂದಾಗಿದ್ದಾಳೆ. ತದನಂತರ ಈಕೆಯ ಪತಿ ಡೇನಿಯಲ್ ಕೂಡ ಪತ್ನಿ ಜೊತೆ ಸೇರಿ ಕಸದಲ್ಲಿ ಬಿಸಾಡಿರುವ ಮೌಲ್ಯಯುತ ವಸ್ತುಗಳ ಬೇಟೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ತನ್ನ ಹಣ ಸಂಪಾದನೆ ಹಾಗೂ ಹಣ ಉಳಿಸುವ ಪ್ರಯತ್ನಗಳ ವಿವರಗಳನ್ನು ಶೆರಿ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ. ‘ಡಂಪ್ ಸ್ಟರ್ ಡಿವಿಂಗ್ಮಾಮಾ’ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ಹೊಂದಿರುವ ಈಕೆ, ಅದರಲ್ಲಿ ತನ್ನ ಡೈವಿಂಗ್ ಸಾಹಸಗಳು ಹಾಗೂ ಇತರ ವಿಷಯಗಳ ಫೋಟೋ ಮತ್ತು ವಿಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾಳೆ.
https://www.instagram.com/p/CSoonqvrhI6/?utm_source=ig_web_copy_link
https://www.instagram.com/p/CP_tym1t7ZL/?utm_source=ig_web_copy_link