
ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಮರ್ಲಿನ್ ಬುಟ್ಟಿಗೀಗ್ ಸ್ಪಷ್ಟ ಉದಾಹರಣೆ. 7 ಮಕ್ಕಳ ತಾಯಿ ಮರ್ಲಿನ್ ಬುಟ್ಟಿಗೀಗ್, ತನ್ನ ಮಗನ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ವಿಡಿಯೋ ಗೇಮ್ ಆಡ್ಬೇಡ ಎಂದು ಗದರುತ್ತಿದ್ದ ಮಗನ ಸ್ನೇಹಿತನ ಮೇಲೆ ಪ್ರೀತಿ ಚಿಗುರಿ ಮದುವೆಯಾಗ್ತೇನೆಂಬ ಕಲ್ಪನೆಯೂ ಆಕೆಗಿರಲಿಲ್ಲವಂತೆ. ಈ ದಂಪತಿ ಈಗ 12ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಮರ್ಲಿನ್ ಗೆ ಆಗ 35 ವರ್ಷವಾಗಿತ್ತು. ಮಕ್ಕಳೊಂದಿಗೆ ಪಶ್ಚಿಮ ಸಸೆಕ್ಸ್ ನ ಕ್ರೌಲಿಯಲ್ಲಿ ವಾಸಿಸುತ್ತಿದ್ದಳು. ಮಗನ 16 ವರ್ಷದ ಗೆಳೆಯ ವಿಲಿಯಂ, ಮನೆಯ ಕೆಲಸಗಳಲ್ಲಿ ಸಹಾಯ ಮಾಡಲು ಮುಂದಾದ. ಮರ್ಲಿನ್ ಅನಾರೋಗ್ಯದಿಂದ ಬಳಲುತ್ತಿದ್ದಳು. ಆಗ್ಲೇ ಮರ್ಲಿನ್ ಮತ್ತು ವಿಲಿಯಂ ಪರಸ್ಪರ ಆಕರ್ಷಿತರಾದರು.
ಕ್ಲೀನಿಂಗ್ ಬ್ಯುಸಿನೆಸ್ ನಡೆಸುವ ಮರ್ಲಿನ್ ಈ ಸಂಬಂಧವನ್ನು ಮೊದಲು ಕುಟುಂಬದವರು ಒಪ್ಪಿರಲಿಲ್ಲವಂತೆ. ಎಲ್ಲರೂ ಅಚ್ಚರಿಗೊಂಡಿದ್ದರಂತೆ. ಈಗಾಗಲೇ ಮಕ್ಕಳಿರುವ ಕಾರಣ ನನಗೆ ಮಕ್ಕಳು ಬೇಡ ಎಂದು ಮರ್ಲಿನ್ ಹೇಳಿದ್ದಾಳೆ. ಆದ್ರೆ ವಿಲಿಯಂ ಬಯಸಿದ್ರೆ ಮಕ್ಕಳನ್ನು ಪಡೆಯಲು ಸಿದ್ಧ ಎಂದಿದ್ದಾಳೆ.
ಚಲನಚಿತ್ರ ನಿರ್ಮಾಪಕನಾಗಿರುವ ವಿಲಿಯಂ, ಮರ್ಲಿನ್ ಮೇಲಿನ ಪ್ರೀತಿ ಎಂದೂ ಕಡಿಮೆಯಾಗುವುದಿಲ್ಲ ಎಂದಿದ್ದಾನೆ. ವಿಲಿಯಂ ನಿರ್ಧಾರದಿಂದ ಕೋಪಗೊಂಡಿರುವ ಕುಟುಂಬಸ್ಥರು ಈಗ್ಲೂ ಮಾತನಾಡುವುದಿಲ್ಲವಂತೆ. ಫೆಬ್ರವರಿ 2009ರಂದು ಇಬ್ಬರು ಮದುವೆಯಾಗಿದ್ದಾರೆ. ಮದುವೆಯಾಗಿ 12 ವರ್ಷವಾದ್ರೂ 15 ವರ್ಷಗಳಿಂದ ಒಟ್ಟಿಗಿದ್ದಾರೆ. ಈಗ್ಲೂ ಜನರು ಅವರ ಸಂಬಂಧ ಒಪ್ಪಿಕೊಳ್ಳುತ್ತಿಲ್ಲ. ಸಾಕಷ್ಟು ಟೀಕೆಗಳು ಕೇಳಿ ಬರ್ತಿರುತ್ತವೆ. ಆದ್ರೆ ಇದು ನಮ್ಮ ಪ್ರೀತಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎನ್ನುತ್ತಾಳೆ ಮರ್ಲಿನ್.