ಬ್ರಿಟನ್‌ನ ಅತಿದೊಡ್ಡ ಕುಟುಂಬದ ಮಾಲೀಕೆ ಮತ್ತು 22 ಮಕ್ಕಳ ತಾಯಿಯಾಗಿರುವ ಸ್ಯೂ ರಾಡ್‌ಫೋರ್ಡ್ ಸುದ್ದಿಯಲ್ಲಿದ್ದಾಳೆ. ಆಕೆ ಐಷಾರಾಮಿ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. 4 ಅಂತಸ್ತಿನ ಮನೆಯಲ್ಲಿ, ಹೊಟೇಲ್ ನಂತಹ ಬಾತ್ರೂಮ್ ನಿರ್ಮಿಸಿದ್ದಾಳೆ. ಸದ್ಯ 19 ಮಕ್ಕಳು ಮತ್ತು ಪತಿ ನೋಯೆಲ್ ರಾಡ್‌ಫೋರ್ಡ್‌ನೊಂದಿಗೆ ಸ್ಯೂ ವಾಸಿಸುತ್ತಿದ್ದಾಳೆ.
22 ಮಕ್ಕಳನ್ನು ಹೊಂದಿರುವ ಸ್ಯೂ, ಸದಾ ಸಕ್ರಿಯವಾಗಿರ್ತಾಳೆ. ತಾನು ಹಾಗೂ ತನ್ನ ಕುಟುಂಬದ ಐಷಾರಾಮಿ ಜೀವನ ಶೈಲಿಯಲ್ಲಿ ಆಕೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಆಕೆ ಮನೆಯಲ್ಲಿ ಎಲ್ಲವೂ ಇದೆ.
ಸ್ಯೂ, ಆಗಾಗ್ಗ, ತನ್ನ ಮನೆಯ ಫೋಟೋಗಳು ಮತ್ತು ಐಷಾರಾಮಿ ಜೀವನಶೈಲಿಯನ್ನು ಹಂಚಿಕೊಳ್ಳುತ್ತಾಳೆ. ಮನೆಯಲ್ಲಿ ಖಾಸಗಿ ಬಾರ್ ನಿಂದ ಹಿಡಿದು ಹಾಟ್ ಟಬ್ ವರೆಗೆ ಎಲ್ಲವೂ ಇದೆ. ಇದ್ರ ಫೋಟೋವನ್ನು ಸ್ಯೂ ಹಂಚಿಕೊಳ್ಳುತ್ತಿರುತ್ತಾಳೆ. ಕೊನೆಯ ಲಾಕ್ ಡೌನ್ ನಲ್ಲಿ ಇವರು ಗಾರ್ಡನ್ ಸೌಂದರ್ಯ ಹೆಚ್ಚಿಸಲು ಮುಂದಾಗಿದ್ದರು.
ಸ್ಯೂ ಮತ್ತು ನೊಯೆಲ್ ರೆಡ್ ಫೋರ್ಡ್ ಮನೆಯಲ್ಲಿ 10 ಬೆಡ್ ರೂಮಿದೆ. ಈ ಕಾರಣಕ್ಕೆ ಮಕ್ಕಳು ರೂಮ್ ಹಂಚಿಕೊಂಡಿದ್ದಾರೆ. ದೊಡ್ಡ ಬೇಕರಿ ವ್ಯಾಪಾರವನ್ನು ಸ್ಯೂ ಕುಟುಂಬ ಮಾಡ್ತಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲ ಮಕ್ಕಳು ಮನೆಯಲ್ಲಿದ್ದಾರೆ.
ಸ್ಯೂ ನ ಹೊಸ ಬಾತ್ರೂಮ್, ಸುಂದರ ಮತ್ತು ಐಷಾರಾಮಿಯಾಗಿದೆ. ಸ್ಯೂ ತನ್ನ 22 ಮಕ್ಕಳನ್ನು ಬೆಳೆಸಲು 10 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾಳೆ.