alex Certify ‘ಮಗನ ಪ್ರೇಯಸಿಗೆ 10 ಡೇಟಿಂಗ್ ರೂಲ್ಸ್ ಪಟ್ಟಿ ಮಾಡಿದ ತಾಯಿ’ : ಪೋಸ್ಟ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಗನ ಪ್ರೇಯಸಿಗೆ 10 ಡೇಟಿಂಗ್ ರೂಲ್ಸ್ ಪಟ್ಟಿ ಮಾಡಿದ ತಾಯಿ’ : ಪೋಸ್ಟ್ ವೈರಲ್

ನವದೆಹಲಿ : ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿದ್ದು, ಹಲವರು ಪ್ರೇಯಸಿ ಪ್ರಿಯತಮೆಗೆ ಡಿಫರೆಂಟ್ ಆಗಿ ಫ್ರಫೋಸ್ ಮಾಡೋಕೆ ಯೋಚಿಸ್ತಿದ್ದಾರೆ. ಇನ್ನೂ ಕೆಲವರು ಬೇರೆ ಬೇರೆ ಸ್ಥಳಗಳಿಗೆ ಹೋಗೋಕೆ ಪ್ಲ್ಯಾನ್ ಮಾಡ್ತಿದ್ದಾರೆ.

ಇದರ ನಡುವೆ ಮಹಿಳೆಯೊಬ್ಬರು ತನ್ನ ಮಗನ ಪ್ರೇಯಸಿಗಾಗಿ 10 ಡೇಟಿಂಗ್ ರೂಲ್ಸ್ ಪಟ್ಟಿ ಮಾಡಿದ್ದಾರೆ. ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಯುವಕನ ತಾಯಿ ಪಟ್ಟಿ ಮಾಡಿದ ರೂಲ್ಸ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಈ ಪಟ್ಟಿಗೆ “ನನ್ನ ಮಗನೊಂದಿಗೆ ಡೇಟಿಂಗ್ ಮಾಡಲು ನಿಯಮಗಳು” ಎಂದು ಶೀರ್ಷಿಕೆ ನೀಡಲಾಗಿದೆ.

“ಅವನು ನಿನ್ನ ಎಟಿಎಂ ಅಲ್ಲ” ಎಂದು ಮೊದಲ ನಿಯಮ ಹೇಳುತ್ತದೆ. ಇನ್ನೊಂದು ರೂಲ್ಸ್ ‘ ನಾನು ನಿನ್ನನ್ನು ಇಷ್ಟಪಡದಿದ್ದರೆ, ನಾನು ನಿನ್ನನ್ನು ದೂರ ಹೋಗುವಂತೆ ಮಾಡುತ್ತೇನೆ ಎಂದು ಅರ್ಥಮಾಡಿಕೊಳ್ಳಿ’ ಎಂದು ಹೇಳಿದ್ದಾರೆ.  ಹಾಗೆಯೇ  “ನೀವು ಅವನ ಉಸ್ತುವಾರಿಯಲ್ಲ ಮತ್ತು ಅವನನ್ನು ಬದಲಾಯಿಸುವುದು ನಿಮ್ಮ ಕೆಲಸವಲ್ಲ ಎಂದು ತಾಯಿ ಹೇಳಿದ್ದಾಳೆ.

2021 ರಲ್ಲಿ ಪೋಸ್ಟ್ ಮಾಡಲಾದ ಈ ಪಟ್ಟಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪಾಪ..ಆ ಗೆಳತಿಯನ್ನು ಬಿಟ್ಟು ಬಿಡಿ ಎಂದು ಟೀಕಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...