
ಅದು ತುಂಬು ಕುಟುಂಬ, ಗಂಡ-ಹೆಂಡತಿ ಆರು ಜನ ಮಕ್ಕಳು ಇದ್ದ ಕುಟುಂಬ. ಬಡತನ ಇದ್ದರೂ ಅದರಲ್ಲೇ ಖುಷಿ ಕಂಡುಕೊಂಡ ಕುಟುಂಬ ಅದು. ಆ ಕುಟುಂಬಕ್ಕೆ ಅದ್ಯಾರ ಕಣ್ಣು ಬಿತ್ತೋ ಏನೋ, ಆ ಮನೆಯ ಒಡತಿ ತಾನು ಹೆತ್ತ 6 ಮಕ್ಕಳನ್ನ ಕೊಂದು ಬಿಟ್ಟಳು. ಅಷ್ಟೇ ಅಲ್ಲ ತಾನು ಕೂಡಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾಳೆ.
ಈ ಬೆಚ್ಚಿಬೀಳಿಸೋ ಘಟನೆ ನಡೆದಿದ್ದು ಮಹಾರಾಷ್ಟ್ರದ ರಾಯಗಢದಲ್ಲಿ. ಇಲ್ಲಿ ಮಹಾತಾಯಿಯೊಬ್ಬಳು ತನ್ನ 5 ಜನ ಹೆಣ್ಣುಮಕ್ಕಳು ಜೊತೆಗೆ 6 ತಿಂಗಳ ಗಂಡು ಮಗುವನ್ನ ಬಾವಿಗೆ ಎಸೆದು ಕೊಂದು ಹಾಕಿದ್ದಾಳೆ.
ಉಪನ್ಯಾಸಕರಿಗೆ ಗುಡ್ ನ್ಯೂಸ್: ಸಂಭಾವನೆ ಶೇ.20 ರಷ್ಟು ಹೆಚ್ಚಳ
ರಾಯಗಢ ಜಿಲ್ಲೆಯಲ್ಲಿರೋ ಪುಟ್ಟ ಗ್ರಾಮ ಮಹಾಡ್, ಇಲ್ಲಿ ಈ ಕುಟುಂಬ ಅನೇಕ ವರ್ಷಗಳಿಂದ ವಾಸ್ತವ್ಯ ಹೂಡಿತ್ತು. ನೆರೆಹೊರೆಯವರು ಹೇಳೋ ಪ್ರಕಾರ ಗಂಡ-ಹೆಂಡತಿ ಕಿತ್ತಾಟ, ಹೊಡೆದಾಟ ಪ್ರತಿನಿತ್ಯವೂ ನಡೆಯುತ್ತಲೇ ಇತ್ತು. ಕುಡಿತದ ದಾಸನಾಗಿದ್ದ ಗಂಡ ಆಕೆಗೆ ಚಿತ್ರಹಿಂಸೆ ಕೊಡುತ್ತಲೇ ಇದ್ದ. ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಆಕೆ ಮಕ್ಕಳನ್ನ ಒಬ್ಬರಾದ ಮೇಲೆ ಒಬ್ಬರನ್ನ ಬಾವಿಯಲ್ಲಿ ಎಸೆದು ಕೊಂದು ಹಾಕಿದ್ದಾಳೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನ ಬಂಧಿಸಿದ್ದಾರೆ.
ಪೊಲೀಸರು ಕೊಟ್ಟ ಮಾಹಿತಿ ಪ್ರಕಾರ ಮಕ್ಕಳನ್ನ ಕೊಂದ ಮಹಾತಾಯಿ ಹೆಸರು ರೂನಾ ಚಿಖುರಿ ಸಹಾನಿ ಅನ್ನಲಾಗಿದೆ. ಈಕೆ ಮಕ್ಕಳನ್ನ ಕೊಂದ ನಂತರ ತಾನು ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಇದು ನೆರೆಹೊರೆಯವರ ಗಮನಕ್ಕೆ ಬಂದ ತಕ್ಷಣ ಆಕೆಯನ್ನ ಹಿಡಿದು ತಡೆದಿದ್ದಾರೆ. ಈಕೆ ಬಾವಿಗೆ ಎಸೆದ ಮಕ್ಕಳನ್ನ ರಕ್ಷಿಸಲು ಪ್ರಯತ್ನ ಪಟ್ಟರೂ, ಅವರು ಆಗಲೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು.