alex Certify ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ

ಮದುವೆಯ ದಿನವು ಪ್ರತಿಯೊಬ್ಬ ವಧುವಿಗೂ ಒಂದು ವಿಶೇಷವಾದ ದಿನವಾಗಿದೆ. ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅಂದಹಾಗೆ ದಕ್ಷಿಣ ಅಮೆರಿಕಾದಲ್ಲಿ ನಡೆದ ಒಂದು ಮದುವೆಯಲ್ಲಿ ಅತ್ತೆ-ಸೊಸೆ ಒಂದೇ ರೀತಿಯ ಉಡುಪು ಧರಿಸಿದ್ದಾರೆ. ಆಮೇಲೆನಾಯ್ತು ಗೊತ್ತಾ..?

ವರದಿ ಪ್ರಕಾರ, ಮದುವೆಯಲ್ಲಿ ಎಲ್ಲರಿಗೂ ಉಡುಪುಗಳನ್ನು ಮೊದಲೇ ಆರ್ಡರ್ ಮಾಡಲಾಗಿತ್ತು. ಆದರೆ, ವರನ ತಾಯಿ ಮದುವೆಯ ಮಧ್ಯದಲ್ಲಿ ತನ್ನ ಉಡುಗೆಯನ್ನು ಬದಲಿಸಿದ್ದಾಳೆ ಮತ್ತು ತನ್ನ ಸೊಸೆ(ವಧು) ಧರಿಸಿರುವ ಉಡುಪನ್ನೇ ಹೋಲುವ ಬಟ್ಟೆ ಧರಿಸಿದ್ದಳು. ಫೋಟೋ ಸೆಷನ್ ನಡೆದಾಗಲೂ ಅದೇ ಉಡುಗೆ ತೊಟ್ಟಿದ್ದಳು. ಇದು ವಧುವಿಗೆ ಸ್ವಲ್ಪ ಕಸಿವಿಸಿಯಾಗಿದೆ.

ಅಷ್ಟೇ ಅಲ್ಲ, ವಧು ತೊಟ್ಟಿದ್ದ ಕಿವಿಯೋಲೆಗಿಂತ ದೊಡ್ಡದಾದ ಕಿವಿಯೋಲೆಯನ್ನು ವರನ ಅತ್ತೆ ತೊಟ್ಟಿದ್ದಾಳೆ. ಇದರಿಂದ ರೇಗಿದ ವಧುವು ಅತ್ತೆಗೆ ಬೈದಿದ್ದಾಳೆ. ಅಲ್ಲದೆ ಉಡುಪು ಬದಲಾಯಿಸುವಂತೆ ಸಿಡಿಮಿಡಿಗೊಂಡಿದ್ದಾಳೆ. ಮದುವೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಬಂದ ಅತಿಥಿಗಳು ಕೂಡ ಕೊಂಚ ಶಾಕ್ ಆಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...