
ಚಿಕ್ಕಮಗಳೂರು: ಕುಡಿಯಬೇಡ ಎಂದು ಅಳಿಯನಿಗೆ ಬುದ್ದಿ ಹೇಳಿದ್ದಕ್ಕೆ ಅತ್ತೆಯನ್ನೇ ಹತ್ಯೆಗೈದ ಅಳಿಯ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಭಾರತಿಬೈಲು ಗ್ರಾಮದಲ್ಲಿ ನಡೆದಿದೆ.
ಯಮುನಾ (65) ಕೊಲೆಯಾದ ಅತ್ತೆ. ಅಳಿಯ ಶಶಿಧರ್ (45) ಅತ್ತೆಯನ್ನು ಹೊಡೆದು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಅಳಿಯ. ಪ್ರತಿದಿನ ಕುಡಿದುಬಂದು ಶಶಿಧರ್ ಜಗಳವಾಡುತ್ತಿದ್ದ. ಮಗಳ ಮನೆಗೆ ಬಂದಿದ್ದ ಅತ್ತೆ ಯಮುನಾ, ಅಳಿಯನಿಗೆ ಬುದ್ಧಿವಾದ ಹೇಳಿದ್ದಾರೆ. ಕುಡಿಯಬೇಡ ಎಂದ್ದಿದ್ದಾರೆ. ಇಷ್ಟಕ್ಕೆ ಕೋಪದ ಬರದಲ್ಲಿ ಸುತ್ತಿಗೆಯಿಂದ ಅತ್ತೆ ಯಮುನಾರನ್ನು ಹೊಡೆದು ಕೊಂದಿದ್ದಾನೆ.
ಬಳಿಕ ಕಾಫಿ ತೋಟಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.