
ಪ್ರೀತಿ ವಿಷ್ಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ ಇಲ್ಲಿ ಅತ್ತೆ – ಅಳಿಯ ಪ್ರೀತಿಗೆ ಬಿದ್ದು ಈ ಕೆಲಸ ಮಾಡಿದ್ದಾರೆ.
ಘಟನೆ ಉತ್ತರ ಪ್ರದೇಶದಲ್ಲಿ ಮುಜಫರ್ ಜಿಲ್ಲೆಯಲ್ಲಿ ನಡೆದಿದೆ. 50 ವರ್ಷದ ಮಹಿಳೆ, ಕೆಲ ತಿಂಗಳ ಹಿಂದೆ ಮಗಳ ಮದುವೆ ಮಾಡಿದ್ದಳು. ಆದ್ರೆ ಮಗಳ ಗಂಡನ ಮೇಲೆ ಅತ್ತೆಗೆ ಮನಸ್ಸಾಗಿದೆ. 25 ವರ್ಷದ ಅಳಿಯನನ್ನು ಅತ್ತೆ ಪ್ರೀತಿಸಲು ಶುರು ಮಾಡಿದ್ದಾಳೆ. ಅಳಿಯ ಕೂಡ ಅತ್ತೆ ಪ್ರೀತಿಗೆ ಬಿದ್ದು, ಮನೆಯಿಂದ ಓಡಿ ಹೋಗಿದ್ದಾನೆ.
ಹತ್ತು ತಿಂಗಳುಗಳ ಕಾಲ ದೂರದೂರಿನಲ್ಲಿ ವಾಸವಾಗಿದ್ದ ಅವರು ನಂತ್ರ ಊರಿಗೆ ಬಂದಿದ್ದಾರೆ. ಇಬ್ಬರು ಮದುವೆಯಾಗುವುದಾಗಿ ಹೇಳಿದ್ದಾರೆ. ಇದನ್ನು ಕೇಳಿದ ಮನೆಯವರು ದಂಗಾಗಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸ್ ಮುಂದೆಯೂ ಪ್ರೀತಿ ಬಿಟ್ಟುಕೊಡದ ಜೋಡಿ ಈಗ ಬೇರೆ ವಾಸ ಶುರು ಮಾಡಿದ್ದಾರೆ.