ಮಂಡ್ಯ : ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯದಿಂದ ಸೊಸೆ ಸುಶೀಲಾ (42) ಎಂಬುವವರು ನಿನ್ನೆ ಸಂಜೆ ಮೃತಪಟ್ಟಿದ್ದರು. ಸೊಸೆಯ ಸಾವಿನ ಸುದ್ದಿ ಕೇಳಿದ ಅತ್ತೆ ಹುಚ್ಚಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹುಚ್ಚಮ್ಮನಿಗೆ ಐವರು ಗಂಡು ಮಕ್ಕಳಿದ್ದು. ಅದರಲ್ಲಿ 2 ನೇ ಮಗನ ಪತ್ನಿ ಸುಶೀಲಾ ಜೊತೆ ಹುಚ್ಚಮ್ಮ ಉತ್ತಮ ಭಾಂಧವ್ಯ ಇಟ್ಟುಕೊಂಡಿದ್ದರು. ಅತ್ತೆ ಸೊಸೆ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ಸಾಂದರ್ಭಿಕ ಚಿತ್ರ