ಮನೆಗೆಲಸ ಮಾಡಲು ಅಥವಾ ಮನೆಗೆಲಸದಲ್ಲಿ ಪರಿಪೂರ್ಣತೆ ತೋರಲು ಸೊಸೆಗೆ ಸೂಚಿಸುವುದು ಕ್ರೌರ್ಯವಾಗುವುದಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಹೇಳಿದೆ. ತನ್ನ ಸೊಸೆಗೆ ಮನೆಕೆಲಸದಲ್ಲಿ ಪರಿಪೂರ್ಣವಾಗುವಂತೆ ಹೇಳುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಏಕಸದಸ್ಯ ಪೀಠದ ನ್ಯಾಯಮೂರ್ತಿ ಡಾ. ವಿ.ಆರ್.ಕೆ. ಕೃಪಾ ಸಾಗರ್ ಅವರು ಪ್ರಕರಣದ ಮೇಲ್ಮನವಿದಾರ ಪತಿ ಮತ್ತು ಅವರ ತಾಯಿ, ಮೃತ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸಿದ್ದರು ಎಂಬುದರ ಬಗ್ಗೆ ಕೋರ್ಟ್ ವಾದ ಆಲಿಸಲು ತಿರಸ್ಕರಿಸಿದೆ. ಮೃತ ಮಹಿಳೆಯು ಮನೆಕೆಲಸದಲ್ಲಿ ಹೆಚ್ಚು ಪರಿಪೂರ್ಣಳಾಗಲು ಪ್ರಕರಣದಲ್ಲಿನ ಆರೋಪಿಗಳು ಸೂಚಿಸಿದ್ದರು ಎಂದು ಹೇಳಲಾಗಿತ್ತು.
“ವಿವಾಹಿತ ಮಹಿಳೆಗೆ ತನ್ನ ಅತ್ತೆ ಮನೆಗೆಲಸವನ್ನು ಮಾಡಲು ಅಥವಾ ಅದರಲ್ಲಿ ಹೆಚ್ಚು ಪರಿಪೂರ್ಣತೆ ಬೇಕು ಎಂದು ಹೇಳುವುದು ಕುಟುಂಬ ಸದಸ್ಯರ ನಡುವಿನ ಕ್ರೌರ್ಯ ಅಥವಾ ಕಿರುಕುಳ ಎಂದು ಎಂದಿಗೂ ಹೇಳಲಾಗುವುದಿಲ್ಲ. ಕೆಲಸಗಳ ಉಲ್ಲೇಖದೊಂದಿಗೆ ಪ್ರಶಂಸೆ ಅಥವಾ ಕಾಮೆಂಟ್ ಮಾಡುವುದು ಯಾವುದೇ ಮನೆಯಲ್ಲಿ ಸಾಮಾನ್ಯ ಅಂಶವಾಗಿದೆ. ಮನೆಯ ಕೆಲಸಗಳನ್ನು ಮಾಡುವಲ್ಲಿನ ಅಪೂರ್ಣತೆಗಾಗಿ ಆಕೆಯನ್ನು ನಿಂದಿಸಿರುವುದು ಅಥವಾ ದೈಹಿಕವಾಗಿ ಥಳಿಸಿರುವ ಯಾವ ಪ್ರಕರಣವೂ ಅಲ್ಲ”ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏಪ್ರಿಲ್ 2008 ರಲ್ಲಿ ಮದುವೆಯಾಗಿ ಎಂಟು ತಿಂಗಳೊಳಗೆ ಸಾವನ್ನಪ್ಪಿದ ಸೊಸೆಯ ವರದಕ್ಷಿಣೆ ಸಾವಿನ ಆರೋಪದಡಿಯಲ್ಲಿ ಶಿಕ್ಷೆಗೊಳಗಾದ ತಾಯಿ ಮತ್ತು ಆಕೆಯ ಮಗ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಮದುವೆಯಾದ ಎಂಟು ತಿಂಗಳಲ್ಲೇ ತಮ್ಮ ಮಗಳು ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ. ಹಾಗು ಆಕೆಯ ಅತ್ತೆ ಮತ್ತು ಮಗ, ತಮ್ಮ ಮಗಳ ವಿವಾಹ ಸಮಾರಂಭ ಮತ್ತು ನಮ್ಮ ಕುಟುಂಬದವರು ಮಾಡಿದ ವ್ಯವಸ್ಥೆಗಳನ್ನು ಕುಟುಂಬದ ಇತರ ಪುತ್ರರ ವಿವಾಹದ ಆಚರಣೆಗಳೊಂದಿಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿದರು.
ಮದುವೆ ಆಚರಣೆಗಳಿಗೆ ಹೋಲಿಕೆ ಮಾಡುವುದು ಅಥವಾ ಹೊಸದಾಗಿ ಮದುವೆಯಾದ ಹುಡುಗಿಗೆ ಮನೆಯ ಕೆಲಸಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಹಾಜರಾಗುವ ಅಗತ್ಯದ ಬಗ್ಗೆ ಹಿರಿಯರು ಹೇಳುವುದು ವರದಕ್ಷಿಣೆ ಮತ್ತು ಕ್ರೌರ್ಯಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ಕೋರ್ಟ್ ಹೇಳಿದೆ.