ನವರಾತ್ರಿ ಪೂಜೆ ಎಲ್ಲೆಡೆ ನಡೆಯುತ್ತಿದೆ. ಭಕ್ತರು ದೇವಿಯ ಆರಾಧನೆಯಲ್ಲಿ ನಿರತರಾಗಿದ್ದಾರೆ. 9 ದಿನಗಳ ಕಾಲ ವೃತ ಮಾಡಿ ಭಕ್ತಿಯಿಂದ ಭಕ್ತರು ಪೂಜೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ ಮೂರು ದಿನ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡ್ತಾರೆ. ಇನ್ನು ಕೆಲ ಭಕ್ತರು ದೇವಸ್ಥಾನಕ್ಕೆ ಹೋಗಿ ತಾಯಿ ಕೃಪೆಗೆ ಪಾತ್ರರಾಗ್ತಾರೆ. ನವರಾತ್ರಿಯಲ್ಲಿ ನಾವು ಮಾಡಿದ ಪೂಜೆ ಫಲ ನೀಡುತ್ತಾ ಎಂಬ ಗೊಂದಲ ಎಲ್ಲ ಭಕ್ತರಿಗೂ ಇದ್ದೇ ಇರುತ್ತೆ. ನಮ್ಮ ಮುಂದೆ ನಡೆಯುವ ಕೆಲ ಘಟನೆಗಳು ದುರ್ಗೆ ಕರುಣೆ ತೋರಿದ್ದಾಳಾ ಇಲ್ವ ಎಂಬುದನ್ನು ತಿಳಿಸುತ್ತದೆ.
ನವರಾತ್ರಿಯಲ್ಲಿ ತಾಯಿ ದುರ್ಗೆ ತನ್ನ ಭಕ್ತರ ಮೇಲೆ ವಿಶಿಷ್ಠ ಕೃಪೆ ತೋರುತ್ತಾಳೆ. ಈ ಸಂದರ್ಭದಲ್ಲಿ ನಿಮ್ಮ ಕನಸಿನಲ್ಲಿ ಗೂಬೆ ಕಂಡ್ರೆ ತಾಯಿ ದುರ್ಗೆ ನಿಮ್ಮ ಪೂಜೆಗೆ ಪ್ರಸನ್ನಳಾಗಿದ್ದಾಳೆಂದರ್ಥ. ಶೀಘ್ರದಲ್ಲಿಯೇ ಮನೆ ಆರ್ಥಿಕ ಸಮಸ್ಯೆ ಕಡಿಮೆಯಾಗಲಿದೆ ಎಂಬುದರ ಸಂಕೇತ.
ನವರಾತ್ರಿಯಂದು ಅಲಂಕಾರ ಮಾಡಿಕೊಂಡ ಮಹಿಳೆ ಕಂಡಲ್ಲಿ ಇದು ಶುಭ ಸಂಕೇತ. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದರ್ಥ.
ನವರಾತ್ರಿಯಲ್ಲಿ ಬೆಳ್ಳಂಬೆಳಿಗ್ಗೆ ಕಮಲದ ಹೂ ಅಥವಾ ತೆಂಗಿನಕಾಯಿ ಕಂಡು ಬಂದಲ್ಲಿ ನಿಮ್ಮ ಮೇಲೆ ತಾಯಿ ದುರ್ಗೆ ಕೃಪೆ ತೋರಿದ್ದಾಳೆಂದು ಅರ್ಥ.
ದೇವಸ್ಥಾನದಿಂದ ಹೊರ ಬರ್ತಿದ್ದಂತೆ ಎದುರಿಗೆ ಹಸು ಕಾಣಿಸಿದಲ್ಲಿ ಶೀಘ್ರದಲ್ಲಿಯೇ ನಿಮ್ಮೆಲ್ಲ ಮನೋಕಾಮನೆ ಪೂರ್ಣವಾಗಲಿದೆಯೆಂದು ತಾಯಿ ಸೂಚನೆ ನೀಡಿದಂತೆ.