![](https://kannadadunia.com/wp-content/uploads/2021/11/elephant-min.jpg)
ಹೃದಯ ವಿದ್ರಾವಕ ವಿಡಿಯೋದಲ್ಲಿ, ತಾಯಿ ಆನೆಯೊಂದು ತನ್ನ ಮೂರು ವರ್ಷದ ಮೃತಪಟ್ಟ ಮರಿಯಾನೆಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದೆ. ಈ ದೃಶ್ಯ ನೋಡಿದ್ರೆ ಎಂಥ ಕಲ್ಲು ಹೃದಯದವರ ಕಣ್ಣಲ್ಲೂ ನೀರು ಬರುತ್ತದೆ. ಮರಿಯಾನೆ ಸತ್ತು ಬಿದ್ದಿದ್ದರೂ ಅಲ್ಲಿಂದ ಹೋಗದ ತಾಯಾನೆ ತನ್ನ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇರುವುದನ್ನು ಕಂಡ ನೆಟ್ಟಿಗರು ಮರುಗಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಶಿಸಿ ಮರಿಯಾನೆ ಮೃತಪಟ್ಟಿದೆ ಎಂದು ಹೇಳಲಾಗಿದೆ. ತನ್ನ ಮರಿಯನ್ನು ಕಂಡ ತಾಯಾನೆ ಹತಾಶವಾಗಿ ತನ್ನ ಸೊಂಡಿಲನ್ನು ಬಳಸಿ ಎಬ್ಬಿಸಲು ಪ್ರಯತ್ನಿಸಿದೆ.
ವರದಿಗಳ ಪ್ರಕಾರ, ಮರಿಯಾನೆಯ ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪಾಲಕ್ಕಾಡ್ ಜಿಲ್ಲೆಯ ಬಳಿಯ ಮಲಂಪುಳ ಅರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ.