ತಾಯಿ ಆನೆಯೊಂದು ತನ್ನ ಮರಿಗೆ ಹೇಗೆ ನಡೆಯಬೇಕೆಂದು ಕಲಿಸುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಈ ಕ್ಲಿಪ್ಅನ್ನು ಹರ್ಷ್ ಮಾರಿವಾಲಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಗಮನ ಸೆಳೆಯುತ್ತಿದೆ. ಈ ವೀಡಿಯೊವನ್ನು ಮೂಲತಃ ಡ್ಯಾನಿ ಡೆರಾನಿ ಅವರು ಹಂಚಿಕೊಂಡಿದ್ದಾರೆ.
ಮರಿ ಆನೆಯೊಂದು ನಡೆಯಲು ಪ್ರಯತ್ನಿಸುತ್ತಾ ಮೊದಲ ಪ್ರಯತ್ನದಲ್ಲೇ ಎಡವಟ್ಟು ಮಾಡಿಕೊಂಡು ಮುಗ್ಗರಿಸಿ ಪಲ್ಟಿ ಹೊಡೆಯಿತು. ಕೂಡಲೇ ಅದರ ತಾಯಿ ಓಡಿ ಬಂದು ತನ್ನ ಸೊಂಡಿಲಿನಿಂದ ಅದಕ್ಕೆ ಆಸರೆಯಾಯಿತು. ಮುಂದೆ ಬೀಳದಂತೆ ಸೊಂಡಿಲಿನಲ್ಲಿ ರಕ್ಷಣೆ ನೀಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ನೀವು ಓಡಲು ಪ್ರಾರಂಭಿಸುವ ಮೊದಲು, ನೀವು ನಡೆಯಲು ಕಲಿಯಬೇಕು, ನೀವು ನಡೆಯಲು ಕಲಿಯುವ ಮೊದಲು, ನೀವು ನಿಲ್ಲಲು ಕಲಿಯಬೇಕು, ನಿರಂತರ ಪ್ರಗತಿ ಯಾವಾಗಲೂ ನಿಧಾನವಾಗಿರುತ್ತದೆ ಎಂಬ ಪೋಸ್ಟ್ನ ಆಕರ್ಷಕ ಶೀರ್ಷಿಕೆ ಕೂಡ ಇದೆ.