
ಮೊಸಳೆಯು ಜಿಂಕೆಯ ಮೇಲೆ ದಾಳಿ ಮಾಡುವ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ವಿಡಿಯೋವನ್ನು ಶೇರ್ ಮಾಡಿದ್ದು, ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಯಿಯು ತನ್ನ ಮಗುವನ್ನು ಯಾವುದೇ ಅಪಾಯದಿಂದ ರಕ್ಷಿಸಲು ಎಲ್ಲಾ ರೀತಿಯಲ್ಲೂ ಹೋರಾಡುತ್ತಾಳೆ, ಅದು ತನ್ನನ್ನು ತಾನೇ ತ್ಯಾಗ ಮಾಡುವುದಕ್ಕೂ ರೆಡಿ ಎಂಬಂತಹ ಅನೇಕ ಉದಾಹರಣೆ ಸಿಗುತ್ತವೆ. ಈ ವಿಡಿಯೋವಂತೂ ಎಂತವರ ಮನಸ್ಸನ್ನೂ ಕರಗಿಸಿಬಿಡುತ್ತದೆ.
BIG NEWS: ಹಿಂದಿ ಹೇರಿಕೆ ವಿರುದ್ಧ ಸಿದ್ದರಾಮಯ್ಯ ಆಕ್ರೋಶ; ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ಎಂದು ಕಿಡಿ
ಮೊಸಳೆಯು ಬೇಟೆಯ ಕಣ್ಣಿಗೆ ಬಿದ್ದಾಗ ಜಿಂಕೆಯೊಂದು ನದಿಗೆ ಅಡ್ಡಲಾಗಿ ಈಜುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ತಾಯಿ ಜಿಂಕೆ ತನ್ನ ಕಂದನಿಗಾಗುತ್ತಿರುವ ಅಪಾಯವನ್ನು ನೋಡುತ್ತದೆ ಮತ್ತು ತನ್ನ ಮಗುವನ್ನು ರಕ್ಷಿಸಲು ನಡುವೆ ಬರುತ್ತದೆ. ಮರಿ ಜಿಂಕೆಯ ಬದಲಿಗೆ ತಾಯಿ ಮೊಸಳೆ ಬೇಟೆಯಾಗುತ್ತಾಳೆ.
ತಾಯಿಯ ಪ್ರೀತಿಯ ಶಕ್ತಿ ಮತ್ತು ವೀರತ್ವವನ್ನು ಯಾವುದೇ ಪದಗಳಿಂದಲೂ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು. ಪೋಷಕರು ಮತ್ತು ಕುಟುಂಬವನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಇದು ನಮಗೆ ನೆನಪಿಸುತ್ತದೆ. ಅವರನ್ನು ಗೌರವಿಸಿ ಮತ್ತು ನಿಮ್ಮ ಸರದಿ ಬಂದಾಗ ಅವರನ್ನು ನೋಡಿಕೊಳ್ಳಿ ಎಂದು ವೀಡಿಯೊಗೆ ಐಎಎಸ್ ಅಧಿಕಾರಿ ಶೀರ್ಷಿಕೆಯನ್ನು ನೀಡಿದ್ದಾರೆ.
ಕಾಮೆಂಟ್‌ಗಳ ವಿಭಾಗದಲ್ಲಿ ನೆಟ್ಟಿಗರು ತಾಯಿಯ ಹಲವಾರು ನಿಸ್ವಾರ್ಥ ತ್ಯಾಗಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.