ಚಿತ್ರದುರ್ಗ: ಗಂಡನ ಮೇಲಿನ ಕೋಪಕ್ಕೆ 8 ವರ್ಷದ ಮಗನಿಗೆ ಬರೆ ಎಳೆದು ತಾಯಿಯೇ ಚಿತ್ರಹಿಂಸೆ ನೀಡಿರುವ ಘಟನೆ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ನಡೆದಿದೆ.
ಏಳು ವರ್ಷಗಳ ಹಿಂದೆ ಪತಿಯಿಂದ ವಿಛ್ಛೇದನ ಪಡೆದುಕೊಂಡಿದ್ದ ತಾಯಿ ನಗ್ಮಾ, ಬಳಿಕ ಎರಡನೇ ವಿವಾಹವಾಗಿದ್ದು, ಮದುವೆ ಬಳಿಕ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಗಂಡನ ಮೇಲಿನ ಕೋಪಕ್ಕೆ ಮೊದಲ ಪತಿಯ ಮಗನಿಗೆ ಕೈ-ಕಾಲುಗಳ ಮೇಲೆ ಬರೆ ಎಳೆದಿದ್ದಾಳೆ. ಬಾಲಕನ ಕೈ-ಕಾಲುಗಳ ಮೇಲೆ ಗಾಯಗಳಾಗಿದ್ದು, ಬಾಲಕ ಸ್ಥಿತಿ ಕಂಡು ಮೊದಲ ಪತಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಗ್ಮಾ ತನ್ನ ಎಡನೇ ಪತಿಯೊಂದಿಗೂ ಕಿರಿಕಿರಿ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಚಿತ್ರದುರ್ಗದ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.