ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಕ್ರೇಜ್ ಹೆಚ್ಚಾಗಿದೆ. ಪ್ರೇಕ್ಷಕರನ್ನು ಸೆಳೆಯಲು ನಿರ್ಮಾಪಕರು, ಹೊಸ ಹೊಸ ರಿಯಾಲಿಟಿ ಶೋಗಳನ್ನು ತರ್ತಿದ್ದಾರೆ. ವಿಚಿತ್ರ ಪ್ರಯೋಗಗಳು ನಡೆಯುತ್ತಿವೆ. ಒಂದು ವಿಚಿತ್ರ ರಿಯಾಲಿಟಿ ಟಿವಿ ಕಾರ್ಯಕ್ರಮ ಗಮನ ಸೆಳೆದಿದೆ. ಹುಡುಗ ಮತ್ತು ಹುಡುಗಿ ಮೊದಲ ಬಾರಿಗೆ ಸಂಪೂರ್ಣವಾಗಿ ಬೆತ್ತಲೆಯಾಗಿ ಭೇಟಿಯಾಗುತ್ತಾರೆ. 21 ದಿನಗಳನ ಕಾಲ ಇದೇ ಸ್ಥಿತಿಯಲ್ಲಿ ಒಟ್ಟಿಗೆ ಇರ್ತಾರೆ.
ಐಷಾರಾಮಿ ಮನೆಯಲ್ಲಿ ಇದು ನಡೆಯುವುದಿಲ್ಲ. ಈ ಜೋಡಿಯ ಬದುಕಿನ ಹೋರಾಟದ ಶೋ ಇದು. ಜೋಡಿಯನ್ನು 21 ದಿನಗಳ ಕಾಡಿನಲ್ಲಿ ಬಿಡಲಾಗುತ್ತದೆ. ಯಾವುದೇ ಮನೆಯಾಗಲಿ, ಆಹಾರವಾಗಲಿ ಅವರಿಗೆ ಸಿಗುವುದಿಲ್ಲ. ದೇಹದ ಮೇಲೆ ಬಟ್ಟೆ ಕೂಡ ಇಲ್ಲದೆ ಅವರು 21 ದಿನ ಕಳೆಯಬೇಕು.
ಇದೊಂದು ಸವಾಲಿನ ಕೆಲಸ. ಕಾಡಿನ ಹವಾಮಾನ, ವಿಷಕಾರಿ ಕೀಟಗಳು ಮತ್ತು ಕಾಡು ಪ್ರಾಣಿಗಳಿಂದ ತಪ್ಪಿಸಿಕೊಳ್ಳುವುದಲ್ಲದೆ, ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ಪರ್ಧಿಗಳು ಸಾಕಷ್ಟು ಕಷ್ಟ ಎದುರಿಸಬೇಕಾದ ಕಾರಣ, ಅನೇಕ ಸ್ಪರ್ಧಿಗಳು ಮಧ್ಯದಲ್ಲಿಯೇ ಶೋ ಬಿಟ್ಟು ಹೋಗ್ತಾರೆ.
ಈ ಕಾರ್ಯಕ್ರಮವನ್ನು ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ರಿಯಾಲಿಟಿ ಶೋ ಹೆಸರು ನೇಕೆಡ್ ಆಂಡ್ ಅಫ್ರೆಡ್. ಶೋ ಆರಂಭದಲ್ಲಿ ಕೆಲ ಸಾಧನಗಳನ್ನು ಸ್ಪರ್ಧಿಗಳು ತೆಗೆದುಕೊಂಡು ಹೋಗಬಹುದು. ಈ ಶೋವನ್ನು ಇಲ್ಲಿಯವರೆಗೆ ಅನೇಕ ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ನಿರೂಪಕರಿಲ್ಲ. ಕ್ಯಾಮರಾಮ್ಯಾನ್ ಗೆ ಮಾತ್ರ ಸ್ಪರ್ಧಿಗಳ ಜೊತೆ ಹೋಗಲು ಅವಕಾಶವಿದೆ. ಈ ಕಾರ್ಯಕ್ರಮದ ಹಲವು ಸಂಚಿಕೆಗಳು ಇಲ್ಲಿಯವರೆಗೆ ಬಿಡುಗಡೆಯಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿಯೂ ನೀವಿದನ್ನು ವೀಕ್ಷಿಸಬಹುದು. ಹೆಚ್ಚಿನ ಕ್ಲಿಪ್‌ಗಳು ಸೆನ್ಸಾರ್ ಆಗುವುದಿಲ್ಲ.