ಮೊಬೈಲ್ ಫೋನ್, ಲ್ಯಾಪ್‌ಟಾಪ್, ಕಂಪ್ಯೂಟರ್ ಹೀಗೆ ಇತರ ಡಿವೈಸ್‌ಗಳ ಭದ್ರತೆಗೆ ಪಾಸ್‌ವರ್ಡ್‌ಗಳು ಬೇಕೇಬೇಕು. ಆದರೆ ಈ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದೇ ಬಹುದೊಡ್ಡ ಸವಾಲು. ಸಂಕೀರ್ಣ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತದೆ ಮತ್ತು ಅವುಗಳನ್ನು ಆಗಾಗ್ಗೆ ಬದಲಾಯಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ಅನೇಕರು ಸುಲಭವಾಗಿ ನೆನಪಿನಲ್ಲಿರುವಂತಹ ದುರ್ಬಲ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಅತಿಹೆಚ್ಚು ಬಳಸಿದ ಪಾಸ್‌ವರ್ಡ್‌ಗಳನ್ನು ಬಹಿರಂಗಪಡಿಸಲಾಗಿದೆ. ಭಾರತದಲ್ಲಿ ಜನರು ಇನ್ನೂ ಸರಳ ಪಾಸ್‌ವರ್ಡ್‌ಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ಅತಿ ಹೆಚ್ಚು ಬಳಸಿದ ಪಾಸ್‌ವರ್ಡ್‌ಗಳು…
123456
admin
12345678
12345
Password
Pass@123 123456789
Admin@123
India@123
admin@123
Pass@1234
1234567890
Abcd@1234
Welcome@123
Abcd@123
admin123
administrator
Password@123
Password
UNKNOWN
NordPass ಪ್ರಕಾರ ಜನರು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ದುರ್ಬಲ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ. ಸ್ಥಳಗಳ ಹೆಸರುಗಳನ್ನು ಬಳಸುವುದು ಕೂಡ ಸಾಮಾನ್ಯವಾಗಿದೆ. ಹೆಚ್ಚಿನ ಭಾರತೀಯರು ತಮ್ಮ ಪಾಸ್‌ವರ್ಡ್‌ಗಳಲ್ಲಿ ಇಂಡಿಯಾ ಎಂಬ ಪದವನ್ನು ಹೆಚ್ಚು ಬಳಸುತ್ತಾರೆ. ಅತ್ಯಂತ ಸಾಮಾನ್ಯವಾದ ಪಾಸ್‌ವರ್ಡ್ india@124.
ವರದಿಯ ಪ್ರಕಾರ ಬ್ರೌಸರ್‌ನಲ್ಲಿ ಸೇವ್ ಮಾಡಿದ ಪಾಸ್‌ವರ್ಡ್‌ಗಳು ಹೆಚ್ಚು ಸುರಕ್ಷಿತವಾಗಿಲ್ಲ. ಪಾಸ್‌ವರ್ಡ್ ಡೇಟಾಬೇಸ್‌ನಲ್ಲಿ ಒಳಗೊಂಡಿರುವ ಸುಮಾರು 70 ಪ್ರತಿಶತದಷ್ಟು ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಕ್ರ್ಯಾಕ್ ಮಾಡಬಹುದು. ಇದರರ್ಥ ಹ್ಯಾಕರ್ ನಿಮ್ಮ ಬ್ರೌಸರ್ ಅನ್ನು ಹ್ಯಾಕ್ ಮಾಡಿದರೆ ಎಲ್ಲಾ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಬೇಧಿಸಬಹುದು. ಇದರಿಂದ ನಿಮ್ಮ ಮಾಹಿತಿಗಳೆಲ್ಲ ಸೋರಿಕೆಯಾಗುವ ಅಪಾಯವಿರುತ್ತದೆ.
ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಲು ಅವುಗಳನ್ನು ಸೇಫ್ ಆಗಿ ಸೇವ್ ಮಾಡಿಕೊಳ್ಳಬೇಕು. ಪಾಸ್ವರ್ಡ್ ನಿರ್ವಾಹಕವು ಸುರಕ್ಷಿತ ಆಯ್ಕೆಯಾಗಿದೆ. ಪಾಸ್‌ವರ್ಡ್ ನಿರ್ವಾಹಕವು ಎಲ್ಲಾ ಪಾಸ್‌ವರ್ಡ್‌ಗಳನ್ನು ಒಂದೇ ಸುರಕ್ಷಿತ ಸ್ಥಳದಲ್ಲಿ ಸೇವ್ ಮಾಡುತ್ತದೆ ಮತ್ತು ಅವುಗಳನ್ನು ಸುರಕ್ಷಿತವಾಗಿಡಲು ಬಲವಾದ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ.