ಜಗತ್ತಿನಲ್ಲಿ ಕೆಲವು ವಿಚಿತ್ರ ಸ್ಥಳಗಳಿವೆ. ಒಂದು ದೇಶದಲ್ಲಿ ಹೊಟೇಲ್ ನ ಬಾತ್ ರೂಮ್ ಇದ್ರೆ, ಇನ್ನೊಂದು ದೇಶದಲ್ಲಿ ಅದೇ ಹೊಟೇಲ್ ನ ಬಾರ್ ಇದೆ. ಅಚ್ಚರಿ ಎನ್ನಿಸಿದ್ರೂ ಇದು ಸತ್ಯ.
ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ ಗಡಿಯಲ್ಲಿ ಈ ಹೋಟೆಲ್ ನಿರ್ಮಿಸಲಾಗಿದೆ. ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋದರೆ, ಕೇವಲ ಕೋಣೆಗಷ್ಟೇ ಅಲ್ಲ ಬೇರೆ ದೇಶಕ್ಕೆ ಹೋಗಿಬಿಡ್ತೀರಾ. ಈ ಹೊಟೆಲ್ ಹೆಸರು ಅರ್ಬೆಜ್ ಫ್ರಾಂಕೊ ಸ್ಯೂಸ್ಸೆ. ಈ ವಿಶೇಷತೆಯಿಂದಾಗಿ ಹೊಟೆಲ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಒಂದೇ ಹೊಟೆಲ್ ಗೆ ಹೋಗಿ, ಎರಡು ದೇಶಗಳಿಗೆ ಹೋಗಿ ಬಂದ ಅನುಭವ ಪಡೆಯುತ್ತಾರೆ.
ಲಾ ಕ್ಯೂರ್ ಹಳ್ಳಿಯಲ್ಲಿರುವ ಅರ್ಬೆಜ್ ಹೋಟೆಲ್ ನ ಮೂರನೇ ಒಂದು ಭಾಗವು ಸ್ವಿಟ್ಜರ್ಲೆಂಡ್ ನಲ್ಲಿ ಮತ್ತು ಉಳಿದ ಭಾಗ ಫ್ರಾನ್ಸ್ ನಲ್ಲಿದೆ. ಜನ ಇದನ್ನು ಸ್ವಿಸ್ ಮತ್ತು ಫ್ರೆಂಚ್ ಹೋಟೆಲ್ ಎರಡೂ ಹೆಸರುಗಳಿಂದ ಕರೆಯುತ್ತಾರೆ.
ಈ ಹೋಟೆಲ್ ನ ಬಾರ್ ಸ್ವಿಜರ್ಲ್ಯಾಂಡ್ನಲ್ಲಿದ್ದರೆ, ಬಾತ್ರೂಮ್ ಫ್ರಾನ್ಸ್ ನಲ್ಲಿದೆ. ಈ ವಿಶಿಷ್ಟ ಹೋಟೆಲ್ ನಲ್ಲಿರುವ ಎಲ್ಲಾ ಕೊಠಡಿಗಳು ಎರಡು ದೇಶಗಳಿಗೆ ಸೇರುತ್ತದೆ. ಹಾಗಾಗಿ ಒಂದೇ ರೂಮಿನಲ್ಲಿದ್ದುಕೊಂಡು ಎರಡೂ ದೇಶಗಳ ಪ್ರವಾಸ ಮಾಡಿದಂತಾಗುತ್ತದೆ.
ಎರಡೂ ದೇಶಗಳ ಸಂಸ್ಕೃತಿಯ ಪ್ರಕಾರ ಹೊಟೆಲ್ ನಿರ್ಮಾಣ ಮಾಡಲಾಗಿದೆ. ಅರ್ಧದಷ್ಟು ಕೋಣೆಗಳ ಜನರು ಫ್ರಾನ್ಸ್ ದೇಶದ ಗಡಿಗೆ, ಅರ್ಧದಷ್ಟು ಜನರು ಸ್ವಿಜರ್ಲ್ಯಾಂಡ್ ದೇಶದ ಗಡಿಗೆ ಬರುವ ರೀತಿಯಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಈ ವಿಶಿಷ್ಟ ಟೂ ಸ್ಟಾರ್ ಹೋಟೆಲ್ ಸುಮಾರು 150 ವರ್ಷಗಳಷ್ಟು ಹಳೆಯದಾಗಿದೆ. ಅದರ ವಿಶೇಷತೆಯಿಂದಾಗಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಈ ಹೊಟೆಲ್ ನ ವಿಶೇಷತೆ ಏನಂದ್ರೆ ಗ್ರಾಹಕರಿಗೆ ಬೇಕಾದ ದೇಶದ ಆಹಾರವನ್ನು ಇಲ್ಲಿ ನೀಡಲಾಗುತ್ತದೆ.