alex Certify ಇಲ್ಲಿದೆ ದೇಶದಲ್ಲಿರುವ ಅತ್ಯಂತ ಶಕ್ತಿಶಾಲಿ 150-160 ಸಿಸಿ ಬೈಕ್‌ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ದೇಶದಲ್ಲಿರುವ ಅತ್ಯಂತ ಶಕ್ತಿಶಾಲಿ 150-160 ಸಿಸಿ ಬೈಕ್‌ ಗಳ ಪಟ್ಟಿ

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ 150-160ಸಿಸಿ ಬೈಕ್‌ಗಳ ಪೈಕಿ ಟಾಪ್ 5 ಪಟ್ಟಿ ಇಂತಿದೆ:

ಯಮಹಾ R15 V4

155ಸಿಸಿಯ ಯಮಹಾ R15 V4 ಸಿಂಗಲ್ ಸಿಲಿಂಡರ್‌, ಲಿಕ್ವಿಡ್-ಕೂಲ್ಡ್‌, ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಮೂಲಕ 181. ಬಿಎಚ್‌ಪಿ ಮತ್ತು 14.2 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಈ ಬೈಕ್‌ಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್ ಇದೆ. 1.81-186 ಲಕ್ಷ ರೂ.ಗಳ ಬೆಲೆ ನಿಗದಿ ಪಡಿಸಲಾಗಿದೆ (ಎಕ್ಸ್‌ಶೋರೂಂ).

ಟಿವಿಎಸ್ ಅಪಾಚೆ RTR 160 4V

ದೇಶದ ಮಾರುಕಟ್ಟೆಯಲ್ಲಿ 150-160ಸಿಸಿ ವಿಭಾಗದಲ್ಲಿ ಅತ್ಯಂತ ಹೆಚ್ಚು ಮಾರಾಟ ಕಂಡಿರುವ ಟಿವಿಎಸ್ ಅಪಾಚೆ RTR 160 4V 159.7ಸಿಸಿ ಸಿಂಗಲ್ ಸಿಲಿಂಡರ್‌, ಆಯಿಲ್-ಕೂಲ್ಡ್ ಇಂಜಿನ್ ಮೂಲಕ 17.3 ಬಿಎಚ್‌ಪಿ ಮತ್ತು 14.73 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸಬಲ್ಲದು. 5-ಸ್ಪೀಡ್ ಗೇರ್‌ ಬಾಕ್ಸ್‌ ಅನ್ನು ಹೊಂದಿರುವ ಅಪಾಚೆ RTR 160 4V ಅನೇಕ ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, 1.24 ಲಕ್ಷ ರೂ.ನಿಂದ 1.32 ಲಕ್ಷ ರೂ.ಗಳ ಬೆಲೆಯಲ್ಲಿ ಬರುತ್ತದೆ (ಎಕ್ಸ್‌ ಶೋ ರೂಂ).

ಬಜಾಜ್ ಪಲ್ಸರ್‌ NS160

160.3 ಸಿಸಿ ಸಿಂಗಲ್ ಸಿಲಿಂಡರ್‌, ಆಯಿಲ್ ಕೂಲ್ಡ್‌ ಇಂಜಿನ್ ಮೂಲಕ 16.9 ಬಿಎಚ್‌ಪಿ ಮತ್ತು 14.6 ಎನ್‌ಎಂ ಶಕ್ತಿ ಉತ್ಪಾದಿಸಬಲ್ಲ ಬಜಾಜ್ ಪಲ್ಸರ್‌ NS160 5-ಸ್ಪೀಡ್ ಗೇರ್‌ ಬಾಕ್ಸ್ ಹೊಂದಿದೆ. ಒಂದೇ ಮಾದರಿಯಲ್ಲಿರುವ ಬರುವ ಬಜಾಜ್ ಪಲ್ಸರ್‌ NS160ಯ ಬೆಲೆಯು 1.35 ಲಕ್ಷ (ಎಕ್ಸ್‌ ಶೋ ರೂಂ) ಇದೆ.

ಹೀರೋ ಎಕ್ಸ್‌ಟ್ರೀಮ್ 160R

ಈ ವರ್ಗದಲ್ಲಿ ಅತ್ಯಂತ ಹಗುರವಾದ ಮೋಟರ್‌ಸೈಕಲ್ ಆಗಿರುವ ಹೀರೋ ಎಕ್ಸ್‌ಟ್ರೀಮ್ 160R 163ಸಿಸಿ ಸಿಂಗಲ್ ಸಿಲಿಂಡರ್‌, ಏರ್‌-ಕೂಲ್ಡ್‌ ಇಂಜಿನ್ ಹೊಂದಿದ್ದು, 15 ಬಿಎಚ್‌ಪಿ ಮತ್ತು 14 ಎನ್‌ಎಂ ಶಕ್ತಿ ಉತ್ಪಾದಿಸಬಲ್ಲದಾಗಿದ್ದು, 5-ಸ್ಪೀಡ್ ಗೇರ್‌ ಬಾಕ್ಸ್‌ನಲ್ಲಿ ಚಲಿಸುತ್ತದೆ. ಇದರ ಬೆಲೆಯು 1-18 ಲಕ್ಷದಿಂದ 1.30 ಲಕ್ಷ ಇದೆ (ಎಕ್ಸ್‌ ಶೋ ರೂಂ)

ಹೋಂಡಾ ಎಕ್ಸ್‌ಬ್ಲೇಡ್

ಈ ಪಟ್ಟಿಯಲ್ಲಿ ಕೊನೆಯಲ್ಲಿರುವ ಹೋಂಡಾ ಎಕ್ಸ್‌ಬ್ಲೇಡ್ 162.71 ಸಿಸಿ ಸಿಂಗಲ್-ಸಿಲಿಂಡರ್‌, ಏರ್‌-ಕೂಲ್ಡ್‌ ಇಂಜಿನ್ ಹೊಂದಿದ್ದು, 13.7 ಬಿಎಚ್‌ಪಿ ಮತ್ತು 14.7 ಎನ್‌ಎಂ ಶಕ್ತಿ ಉತ್ಪಾದಿಸಬಲ್ಲದಾಗಿದೆ. ಈ ಇಂಜಿನ್‌ಗೆ 5-ಸ್ಪೀಡ್ ಗೇರ್‌ಬಾಕ್ಸ್‌ ನೀಡಲಾಗಿದೆ. 1.21 ಲಕ್ಷ ರೂ. ಬೆಲೆಯನ್ನು ಈ ಬೈಕ್‌ಗೆ ನಿಗದಿ ಮಾಡಲಾಗಿದೆ (ಎಕ್ಸ್‌ ಶೋ ರೂಂ).

yamaha r15 v4
TVS Apache RTR 160 4V

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...