alex Certify ಕರ್ನಾಟಕದಲ್ಲಿವೆ 176 ತಳಿಯ ಚಿಟ್ಟೆ…! ಗಣತಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದಲ್ಲಿವೆ 176 ತಳಿಯ ಚಿಟ್ಟೆ…! ಗಣತಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

Most in Assam, Least in Haryana: India's Butterfly Census Finds Diverse Results

ದೇಶದ ಜೀವವೈವಿಧ್ಯತೆಯನ್ನು ಅರಿಯಲು ಹಾಗೂ ಚಿಟ್ಟಿಗಳ ಜನಸಂಖ್ಯೆಯ ನಕ್ಷೆಯನ್ನು ಸಿದ್ಧಪಡಿಸಲು 50ರಷ್ಟು ಪರಿಸರ ಸಂಘಟನೆಗಳು ಅಖಿಲ ಭಾರತ ಚಿಟ್ಟಿಗಳ ಗಣತಿ ಮಾಡಿವೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ನೇತೃತ್ವದಲ್ಲಿ ಸೆಪ್ಟೆಂಬರ್‌ 2020ರಲ್ಲಿ ಹಮ್ಮಿಕೊಳ್ಳಲಾದ ಈ ಗಣತಿಯ ವರದಿಯನ್ನು ಆಗಸ್ಟ್ 1ರಂದು ಬಿಡುಗಡೆ ಮಾಡಲಾಗಿದೆ. ಗಣತಿಯ ಪ್ರಕಾರ ದೇಶಾದ್ಯಂತ ಮಾನವರಿಗೆ ತಿಳಿದಿರುವ 550ಕ್ಕೂ ಹೆಚ್ಚು ತಳಿಯ ಚಿಟ್ಟೆಗಳಿವೆ.

ಕರ್ನಾಟಕದಲ್ಲಿ 176 ಬಗೆಯ ಚಿಟ್ಟೆಗಳಿವೆ ಎಂದು ಗಣತಿಯಿಂದ ತಿಳಿದುಬಂದಿದೆ. ಅಸ್ಸಾಂನಲ್ಲಿ ಅತ್ಯಧಿಕ 315 ತಳಿಯ ಚಿಟ್ಟೆಗಳು ಕಂದುಬಂದಿವೆ.

BIG NEWS: ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ ಸಿಎಂ

ಕೇವಲ 60 ತಳಿಯ ಚಿಟ್ಟೆಗಳು ಕಂಡುಬಂದ ಹರಿಯಾಣಾದಲ್ಲಿ ಅತ್ಯಂತ ಕಡಿಮೆ ವೈವಿಧ್ಯತೆ ಕಂಡುಬಂದಿದೆ.

ಪರಿಸರದ ಸೂಕ್ಷ್ಮ ಬದಲಾವಣೆಗಳಿಗೆ ಪ್ರತಿಕ್ರಿಯಿಸುವ ಚಿಟ್ಟೆಗಳು ಜೀವವೈವಿಧ್ಯತೆಯ ಸೂಚಕಗಳಾಗಿದ್ದು, ಅವುಗಳ ಇರುವಿಕೆಯ ಪ್ರಮಾಣದಿಂದ ಯಾವುದೇ ಪ್ರದೇಶದ ಮಣ್ಣು ಹಾಗೂ ಗಾಳಿ ಯಾವ ಮಟ್ಟಿಗೆ ಮಾಲಿನ್ಯದಿಂದ ಪ್ರಭಾವಿತವಾಗಿವೆ ಎಂದು ತಿಳಿದು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸರ್ವೇಯಲ್ಲಿ 1000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, 20000 ಕ್ಕೂಅಧಿಕ ಫೊಟೋಗಳನ್ನು ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...