ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಸೇರಿದಂತೆ ಅನೇಕ ಅಪ್ಲಿಕೇಷನ್ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿದೆ. ಅಮೆಜಾನ್ ಪ್ರೈಮ್ ನಲ್ಲಿ ಎಲ್ಲ ಬಗೆಯ ಸಿನಿಮಾ ಲಭ್ಯವಿದೆ. 2021 ವರ್ಷದವರೆಗೆ ಅಮೆಜಾನ್ ನಲ್ಲಿ ಸಾಕಷ್ಟು ಭಯಾನಕ ಚಿತ್ರಗಳು ಬಿಡುಗಡೆಯಾಗಿವೆ. ಅದ್ರಲ್ಲಿ ಕೆಲವು ಸಿನಿಮಾಗಳು ಅತ್ಯಂತ ಭಯಾನಕವಾಗಿದೆ. ಚಿತ್ರ ವೀಕ್ಷಣೆ ಮಾಡಿದ ಜನರು ನಿದ್ರೆಯಲ್ಲೂ ಬೆಚ್ಚಿ ಬೀಳುತ್ತಾರೆ.
ಭಯಾನಕ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿರುವುದು ಹಾಲಿವುಡ್ ಫಿಲ್ಮ್ SAW. ಇಲ್ಲಿಯವರೆಗೆ ಈ ಚಿತ್ರದ 7 ಭಾಗಗಳು ರಿಲೀಸ್ ಆಗಿದೆ. ಇದು ಒಬ್ಬ ಸೈಕೋ ಕಿಲ್ಲರ್ ಕಥೆಯಾಗಿದ್ದು, ಇದರಲ್ಲಿ ಕಿಲ್ಲರ್ ಜನರಿಗೆ ಜೀವ ತೆಗೆಯುವಂತ ಆಟಗಳನ್ನು ಆಡಿಸಿ ಅದರಲ್ಲಿ ಸೋತವರಿಗೆ ಸಾವಿನ ಶಿಕ್ಷೆ ಕೊಡುತ್ತಾನೆ. ಸೈಕೊ ಕಿಲ್ಲರ್ ಅತ್ಯಂತ ಭಯಾನಕವಾಗಿ ಜನರನ್ನು ಸಾಯಿಸುತ್ತಾನೆ.
ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯಿಂದ ಕೆಲಸ ಮಾಡಲು ಆರಂಭಿಸಿದರು. ಈ ಸಮಯದಲ್ಲಿ ಜೂಮ್ ಅಪ್ಲಿಕೇಶನ್ ನಲ್ಲಿ ಮೀಟಿಂಗ್ ಗಳು ಶುರುವಾಯ್ತು. ಜೂಮ್ ಮೀಟಿಂಗ್ ಅನ್ನೇ ಮುಖ್ಯವಾಗಿರಿಸಿಕೊಂಡು ಬಂದ ಮೂವಿ HOST. ಈ ಮೂವಿಯನ್ನು ಲಾಕ್ ಡೌನ್ ಸಮಯದಲ್ಲೇ ಚಿತ್ರಿಸಲಾಗಿದೆ. ಜೂಮ್ ಮೀಟಿಂಗ್ ಸಮಯದಲ್ಲಿ ಕೆಲ ವ್ಯಕ್ತಿಗಳಿಗೆ ತಮ್ಮ ಮನೆಯಲ್ಲಿ ಚಿತ್ರ ವಿಚಿತ್ರ ಅನುಭವವಾಗುತ್ತದೆ. ಜೂಮ್ ಮುಖಾಂತರವೇ ಏನೋ ಒಂದು ಅವರ ಮನೆ ಪ್ರವೇಶ ಮಾಡುವಂತೆ ಮಾಡಲಾಗಿದೆ ಎಂಬುದು ಅವರಿಗೆ ಆಮೇಲೆ ತಿಳಿಯುತ್ತದೆ. ಇಂತಹ ಕೆಲ ಸನ್ನಿವೇಶಗಳೇ ಈ ಚಿತ್ರದ ಮೂಲವಸ್ತು.
ಪ್ರೈಮ್ ನ ಮೂರನೇ ಚಿತ್ರ LIGHTS OUT. ಅಮೆಜಾನ್ ಪ್ರೈಮ್ ನಲ್ಲಿರುವ ಅತ್ಯಂತ ಭಯಾನಕ ಚಿತ್ರಗಳ ಪೈಕಿ ಇದೂ ಒಂದು. ಇದು ರಾತ್ರಿಯಾದೊಡನೆ ಹೆಚ್ಚು ಶಕ್ತಿಶಾಲಿಯಾಗುವ ಒಂದು ಭೂತದ ಕಥೆಯಾಗಿದೆ. ಈ ಚಿತ್ರದ ಪ್ರತಿಯೊಂದು ಹಂತವೂ ರೋಮಾಂಚನ ಉಂಟುಮಾಡುತ್ತದೆ. ದುರ್ಬಲ ಹೃದಯದವರು ಇದನ್ನು ನೋಡಲೇಬಾರದು.
ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ನೀವು BEFORE I WAKE ಮೂವಿಯನ್ನು ತಪ್ಪದೇ ನೋಡಿ. ಈ ಚಿತ್ರ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಈ ಚಿತ್ರದಲ್ಲಿ ದಂಪತಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಆ ಮಗು ಮಲಗಲು ಹೆದರುತ್ತದೆ. ಏಕೆಂದರೆ ಅದು ಏನೇನು ಕನಸು ಕಾಣುತ್ತದೆಯೋ ಅದು ವಾಸ್ತವದಲ್ಲಿ ನಡೆಯುತ್ತದೆ. ಆ ಮಗುವಿನ ಕೆಟ್ಟ ಮತ್ತು ಒಳ್ಳೆಯ ಕನಸೆಲ್ಲವೂ ನಿಜವಾಗುತ್ತದೆ. ಸುತ್ತಲು ನಡೆಯುವ ಘಟನೆಗಳು ಮಗುವಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಅಮೆಜಾನ್ ಪ್ರೈಮ್ ಚಿತ್ರದ ಲಿಸ್ಟ್ ನಲ್ಲಿ TUMBAAD ಇಲ್ಲದೇ ಇರುವುದಿಲ್ಲ. ಈ ಚಿತ್ರ ಜನರಿಗೆ ಅತಿ ಆಸೆ ಕೆಟ್ಟದ್ದು ಮಾಡುತ್ತದೆ ಎಂಬ ಒಳ್ಳೆಯ ಸಂದೇಶ ನೀಡುತ್ತದೆ. ಈ ಚಿತ್ರಕ್ಕೆ IMDB ಯಲ್ಲಿ 10ಕ್ಕೆ 8.3 ರೇಟಿಂಗ್ ದೊರೆತಿದೆ ಎಂದಾದರೆ ಈ ಚಿತ್ರದ ಬಗ್ಗೆ ಇನ್ನು ಹೆಚ್ಚೇನು ಹೇಳಬೇಕಾಗಿಲ್ಲ. ಈ ಮೂವಿ ಬಹಳ ಹೆದರಿಕೆ ಹುಟ್ಟಿಸುವುದರ ಜೊತೆಗೆ ಒಳ್ಳೆಯ ಸಂದೇಶ ನೀಡುತ್ತದೆ.
THE BOY ಚಿತ್ರ ಕೂಡ ಅಮೆಜಾನ್ ಪ್ರೈಮ್ ಲಿಸ್ಟ್ ನಲ್ಲಿದೆ. ಈ ಚಿತ್ರದಲ್ಲಿ ಒಬ್ಬ ಅಜ್ಜ, ಅಜ್ಜಿ ಪುಟ್ಟ ಮಗುವಿನೊಂದಿಗೆ ವಾಸವಾಗಿರುತ್ತಾರೆ. ನಂತರ ಅವರು ಮಗುವನ್ನು ನೋಡಿಕೊಳ್ಳಲು ಒಬ್ಬ ಯುವತಿಯನ್ನು ನೇಮಿಸುತ್ತಾರೆ. ಸ್ವಲ್ಪ ದಿನಗಳು ಕಳೆದ ಮೇಲೆ ಯುವತಿಗೆ ದಂಪತಿ ಮಗುವೆಂದು ಕರೆಯುವ ಹುಡುಗ ಮನುಷ್ಯನಲ್ಲ. ಒಂದು ಗೊಂಬೆ ಎನ್ನುವುದು ತಿಳಿಯುತ್ತದೆ. ಚಿತ್ರದ ಕಥೆ ಅಲ್ಲಿಂದ ಶುರುವಾಗುತ್ತದೆ.
THE GRUDGE ಚಿತ್ರ ಕೂಡ ಅಮೆಜಾನ್ ಪ್ರೈಮ್ ನಲ್ಲಿರುವ ಭಯಾನಕ ಚಿತ್ರಗಳಲ್ಲಿ ಒಂದಾಗಿದೆ. ಇದು ಮರ್ಡರ್ ಕೇಸ್ ಗಳನ್ನು ಕಂಡುಹಿಡಿಯುವ ಒಬ್ಬ ಡಿಟೆಕ್ಟಿವ್ ಕಥೆಯಾಗಿದೆ. ಮರ್ಡರ್ ಕೇಸ್ ಗಳನ್ನು ಸಾಲ್ವ್ ಮಾಡುವಾಗ ಡಿಟೆಕ್ಟಿವ್ ಗೆ ಆಗುವ ಅನುಭವಗಳನ್ನು ಚಿತ್ರದಲ್ಲಿ ತೋರಿಸಿದ್ದಾರೆ.