
ದೇಶಾದ್ಯಂತ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು ಪ್ರಚಾರದ ವೇಳೆ ಅನೇಕ ವಿಶೇಷ ಆಸಕ್ತಿದಾಯಕ ಮತ್ತು ಮೋಜಿನ ಸಂಗತಿಗಳು ಕಾಣಸಿಗುತ್ತವೆ. ಇಂತಹ ಸಂಗತಿಗಳ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಮಹುವಾ ಮೊಯಿತ್ರಾ ವೇದಿಕೆಯಲ್ಲಿ ಒಟ್ಟಿಗೆ ಕೈಕೈ ಹಿಡಿದು ನೃತ್ಯ ಮಾಡಿದ್ದಾರೆ.
ನಾಡಿಯಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯ ವೇಳೆ ವೇದಿಕೆಯಲ್ಲಿ ಒಟ್ಟಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
“ಇದುವರೆಗಿನ ಅಭಿಯಾನದಲ್ಲಿ ಇದು ಅತ್ಯಂತ ಮೋಜಿನ ಕ್ಲಿಪ್,” ಎಂದು ಮಹುವಾ ಮೊಯಿತ್ರಾ ಮಮತಾ ಬ್ಯಾನರ್ಜಿಯೊಂದಿಗೆ ತಮ್ಮ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಡಿಯಾ ಜಿಲ್ಲೆಯ ತೆಹಟ್ಟಾದಲ್ಲಿ ನಿನ್ನೆ ಮೊಯಿತ್ರಾ ಅವರನ್ನು ಬೆಂಬಲಿಸುವ ರ್ಯಾಲಿಯನ್ನುದ್ದೇಶಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದರು.
ತೃಣಮೂಲ ಕಾಂಗ್ರೆಸ್ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಮಹುವಾ ಮೊಯಿತ್ರಾ ಅವರನ್ನು ಕಣಕ್ಕಿಳಿಸಿದೆ.