alex Certify ವಿಶ್ವದ ಅತ್ಯಂತ ದುಬಾರಿ ಕಾಂಡೋಮ್: ಕುರಿ ಕರುಳಿನಿಂದ ತಯಾರಾದ ಇದರ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ದುಬಾರಿ ಕಾಂಡೋಮ್: ಕುರಿ ಕರುಳಿನಿಂದ ತಯಾರಾದ ಇದರ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಗರ್ಭ‌ ನಿರೋಧಕ ವಿಧಾನಗಳಲ್ಲಿ ಕಾಂಡೋಮ್ ಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಕಾಂಡೋಮ್ ಗಳನ್ನು ಬಳಸಲಾಗುತ್ತದೆ. ವೈದ್ಯಕೀಯ ಚಿಕಿತ್ಸಾಲಯಗಳಿಂದ ಹಿಡಿದು ಪಾನ್ ಶಾಪ್, ಕಿರಾಣಿ ಅಂಗಡಿಗಳ ವ್ಯಾಪ್ತಿಯಲ್ಲಿಯೂ ಕಾಂಡೋಮ್ ಗಳು ಸುಲಭವಾಗಿ ಲಭ್ಯವಿರುತ್ತವೆ.

ಹೌದು, ದುಬಾರಿಯಲ್ಲದ ಕಾರಣ ಸಾಮಾನ್ಯ ವರ್ಗಕ್ಕೆ ಸೇರಿದ ಜನರು ಕೂಡ ಸುಲಭವಾಗಿ ಕಾಂಡೋಮ್ ಪಡೆದು ಬಳಸುತ್ತಾರೆ. ಆದರೆ, ಆರಂಭದಲ್ಲಿ ಕಾಂಡೋಮ್ ಗಳನ್ನು ಶ್ರೀಮಂತ ವರ್ಗದವರು ಮಾತ್ರ ಬಳಸುತ್ತಿದ್ದರು. ಸುಮಾರು 200 ವರ್ಷಗಳ ಹಿಂದೆ ಕಾಂಡೋಮ್ ಬೆಲೆ ಎಷ್ಟಿತ್ತು ಎನ್ನುವುದನ್ನು ನೀವು ಊಹಿಸಲು ಸಾಧ್ಯವೇ ? ಈಗಿನ ರೂಪಾಯಿ ಲೆಕ್ಕದಲ್ಲಿ ಹೋಲಿಸಿದರೆ ಆಗ ಸುಮಾರು 44 ಸಾವಿರ ರೂಪಾಯಿ ಬೆಲೆ ಇತ್ತು ಎಂದು ಹೇಳಲಾಗಿದೆ. ಆದರೆ, ಇದನ್ನು ಆಧಾರರಹಿತ ಎನ್ನಬಹುದು. ಏಕೆಂಬುದನ್ನು ತಿಳಿಯಲು ಮುಂದೆ ಓದಿ.

ಕೆಲವು ದಿನಗಳ ಹಿಂದೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ, ಸ್ಪೇನ್ ದೇಶದ ಒಂದು ಸಣ್ಣ ಪಟ್ಟಣದಲ್ಲಿ ಪೆಟ್ಟಿಗೆಯೊಂದು ಕಂಡುಬಂದಿತ್ತು. ಅದರಲ್ಲಿ ಕಾಂಡೋಮ್ ಕೂಡ ಕಂಡುಬಂದಿದ್ದು, ಅದರ ಗಾತ್ರ 19 ಸೆ.ಮೀ. ಇರುವುದು ಗೊತ್ತಾಯಿತು. ಸಂಶೋಧನೆಯ ನಂತರ ಕಾಂಡೋಮ್ ಸುಮಾರು 200 ವರ್ಷಗಳಷ್ಟು ಹಳೆಯದು ಎನ್ನುವುದು ತಿಳಿದುಬಂದಿದೆ.

ಇನ್ನು ಇಷ್ಟೊಂದು ಹಳೆಯದಾದ ಕಾಂಡೋಮ್ ಕ್ಯಾಟವಿಕಿಯಲ್ಲಿ ಹರಾಜು ಹಾಕುವುದಾಗಿ ಘೋಷಿಸಲಾಗಿದೆ. ಹಳೆಯ ಕಾಂಡೋಮ್ ಹರಾಜಿನಲ್ಲಿ ಭಾರಿ ಸಂಖ್ಯೆಯ ಜನ ಭಾಗವಹಿಸಿದ್ದಾರೆ. ಐತಿಹಾಸಿಕ ಕಾಂಡೋಮ್ ಅನ್ನು ಆಮ್ ಸ್ಟರ್ ಡ್ಯಾಂನ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಆನ್ಲೈನ್ನಲ್ಲಿ ಹರಾಜು ಹಾಕಲಾಗಿದ್ದು, ಈ ಕಾಂಡೋಮ್ ಬಹಳ ಅಪರೂಪದ್ದು ಎಂದು ಭಾವಿಸಲಾಗಿದೆ. ಇಂತಹ ಅಪರೂಪದ ಕಾಂಡೋಮ್ ಗಳನ್ನು ಆಯ್ದ ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರ ಕಾಣಬಹುದಾಗಿದೆ. 19 ಸೆ.ಮೀ. ಉದ್ದವಿರುವ ಈ ಕಾಂಡೋಮ್ ಅನ್ನು ವಿಶ್ವದ ಅತ್ಯಂತ ದುಬಾರಿ ಎಂದು ಹೇಳಲಾಗುತ್ತಿದೆ.

ಸುಮಾರು 200 ವರ್ಷಗಳ ಹಿಂದೆ ಕಾಂಡೋಮ್ ದುಬಾರಿಯಾಗಿತ್ತು. ಆಗ ತಾಂತ್ರಿಕ ಸೌಲಭ್ಯಗಳ ಕೊರತೆ ಇದ್ದ ಕಾರಣ ಕಾಂಡೋಮ್ ತಯಾರಿಸಲು ಹೆಚ್ಚು ಸಮಯವಾಗುತ್ತಿತ್ತು. ಕಾಂಡೋಮ್ ಗಳ ಬೆಲೆ ಹೆಚ್ಚಾಗಿದ್ದ ಕಾರಣ ಶ್ರೀಮಂತ ವರ್ಗದವರು ಮಾತ್ರ ಬಳಸುತ್ತಿದ್ದರು. ಆ ದಿನಗಳಲ್ಲಿ ಕಾಂಡೋಮ್ ಗಳ ಉದ್ದ ಸಾಮಾನ್ಯವಾಗಿ 15 ಸೆಂಟಿಮೀಟರ್ ಇತ್ತು. 19ನೇ ಶತಮಾನದಲ್ಲಿ ಅಗ್ಗದ ರಬ್ಬರ್ ಕಾಂಡೋಮ್ ಗಳು ಬಳಕೆಯಲ್ಲಿದ್ದವು. ನಂತರ ಕುರಿ ಕರುಳಿನಿಂದ ತಯಾರಿಸಿದ ಕಾಂಡೋಮ್ ಗಳು ಕೂಡ ಬಳಕೆಗೆ ಬಂದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...