ಪ್ರೇಮ ವಿವಾಹಗಳಲ್ಲೇ ಹೆಚ್ಚಿನ ವಿಚ್ಛೇದನಗಳು ಉಂಟಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ವೈವಾಹಿಕ ಜೀವನದಲ್ಲಿನ ವಿವಾದದ ಬಗೆಗಿನ ಅರ್ಜಿ ವರ್ಗಾವಣೆ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ವಕೀಲರು ನ್ಯಾಯಾಲಯಕ್ಕೆ ಇದು ಪ್ರೇಮ ವಿವಾಹ ಎಂದು ತಿಳಿಸಿದಾಗ “ಹೆಚ್ಚಿನ ವಿಚ್ಛೇದನಗಳು ಪ್ರೇಮ ವಿವಾಹದಿಂದ ಮಾತ್ರ ಉದ್ಭವಿಸುತ್ತವೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ನಂತರ ನ್ಯಾಯಾಲಯವು ಮಧ್ಯಸ್ಥಿಕೆಗೆ ಕರೆ ನೀಡಿತು. ಆದರೆ ಇದಕ್ಕೆ ಪ್ರಕರಣದಲ್ಲಿನ ಪತಿ ವಿರೋಧಿಸಿದರು.
ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಪರಸ್ಪರ ಒಪ್ಪಿಗೆಯಿದ್ದಲ್ಲಿ ವಿಚ್ಛೇದನಕ್ಕೆ 6 ತಿಂಗಳು ಕಾಯಬೇಕಿಲ್ಲ. ಡಿವೋರ್ಸ್ ನೀಡಬಹುದು ಎಂದು ಹೇಳಿತ್ತು.