ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬರ್ತಿದೆ. ಅನೇಕ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಭಾರತದಲ್ಲೂ ಕೊರೊನಾ ಮೂರನೇ ಅಲೆ ಭಯ ಕಾಡುತ್ತಿದೆ. ಈ ನಡುವೆ ಅಮೆರಿಕದಲ್ಲಿ R.1 ರೂಪಾಂತರಿ ಕಂಡು ಬಂದಿದ್ದು ಇದು ಅತ್ಯಂತ ಭಯಾನಕ ರೂಪಾಂತರಿ ಎಂದು ವರದಿಗಳು ತಿಳಿಸಿವೆ.
ವಿಶ್ವದಲ್ಲಿ ಆರ್.1 ರೂಪಾಂತರಿ ಪ್ರಕರಣವು ಕಡಿಮೆ ಪ್ರಮಾಣದಲ್ಲಿದ್ದರೂ ಸಹ ಇದು ಅತ್ಯಂತ ಭಯಾನಕವಾದ ರೂಪಾಂತರಿ ಎಂಬುದನ್ನು ಕಡೆಗಣಿಸುವಂತಿಲ್ಲ. ಭಾರತದಲ್ಲಿ ಕೊರೊನಾ 2ನೆ ಅಲೆ ಅತಿಯಾಗಿ ಆರ್ಭಟಿಸುತ್ತಿದ್ದ ವೇಳೆ ಆರ್. 1 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು ಭಾರೀ ಚಿಂತೆಗೀಡುಮಾಡಿತ್ತು.
ಕೊರೊನಾ ವೈರಸ್ ಈ ರೂಪಾಂತರಿಯ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರ್.1 ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದರೂ ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ವಾರ್ನಿಂಗ್ ನೀಡಿದ್ದಾರೆ.
ಅಮೆರಿಕದಲ್ಲಿ ಕೆಲ ದಿನಗಳ ಹಿಂದಷ್ಟೇ ಆರ್.1 ರೂಪಾಂತರಿಯನ್ನು ತಜ್ಞರು ಪತ್ತೆ ಮಾಡಿದ್ದರು. ಇದೇ ರೂಪಾಂತರಿ ಜಪಾನ್ನಲ್ಲಿ ಕಳೆದ ವರ್ಷ ಕಂಡು ಬಂದಿತ್ತು. ಇದನ್ನು ಹೊರತುಪಡಿಸಿ ಆರ್. 1 ರೂಪಾಂತರಿಯು ಇನ್ನು ಕೆಲ ದೇಶಗಳಲ್ಲಿ ಕಂಡು ಬಂದಿದೆ.