alex Certify ಇಲ್ಲಿದೆ ಬಾಲಿವುಡ್ ಸೆಲೆಬ್ರಿಟಿಗಳ ಮುಜುಗರದ ಅಪ್ಪುಗೆ ಫೋಟೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬಾಲಿವುಡ್ ಸೆಲೆಬ್ರಿಟಿಗಳ ಮುಜುಗರದ ಅಪ್ಪುಗೆ ಫೋಟೋಗಳು

ತಾಯಿ-ಮಗುವನ್ನು ಅಪ್ಪಿ ಹಿಡಿದುಕೊಳ್ಳುವುದು ಕರುಳ ಬಳ್ಳಿಯ ಸಂಬಂಧವಾಗಿದೆ. ಹಾಗೆಯೇ ಸ್ನೇಹಿತರು, ಸಂಗಾತಿ ಅಥವಾ ಕುಟುಂಬಸ್ಥರ ಜೊತೆಗೆ ಅಪ್ಪುಗೆ ಮಾಡಿಕೊಳ್ಳುವುದು ನಮ್ಮಲ್ಲಿ ಭಾವನಾತ್ಮಕವಾಗಿ ಬೆರೆಯುವಂತಾಗುತ್ತದೆ. ಆದರೆ, ಕೆಲವು ಸೆಲೆಬ್ರಿಟಿಗಳ ಅಪ್ಪುಗೆಗಳ ಫೋಟೋ ಅಥವಾ ವಿಡಿಯೋ ನೋಡಿದ್ರೆ ವಿಚಿತ್ರವಾದ ಅಥವಾ ಮುಜುಗರದ ಕ್ಷಣದಂತಿರುತ್ತದೆ. ಅಂತಾ ಕೆಲವು ಮುಜುಗರದ ಫೋಟೋಗಳು ಇಂತಿವೆ.

ಸಲ್ಮಾನ್ ಖಾನ್ ಹಾಗೂ ಸನಾ ಖಾನ್:

2017 ರಲ್ಲಿ ಕಾರ್ಯಕ್ರಮವೊಂದರಲ್ಲಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸನಾ ಖಾನ್ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್‌ ಅವರನ್ನು ತಬ್ಬಿಕೊಂಡಿದ್ದರು. ಆದರೆ ಸನಾ ಖಾನ್ ಬ್ಯಾಕ್ ಲೆಸ್ ಉಡುಪು ಧರಿಸಿದ್ದರಿಂದ ಸಲ್ಲು ತಬ್ಬಿಕೊಂಡಾಗ ಕೈ ಮುಷ್ಠಿ ಬಿಗಿ ಹಿಡಿದಿದ್ದಾರೆ. ಈ ಫೋಟೋ ಭಾರಿ ಟ್ರೋಲ್ ಗೆ ಒಳಗಾಗಿತ್ತು.

ಅನುಷ್ಕಾ ಶರ್ಮಾ, ರಣವೀರ್ ಸಿಂಗ್

ಫ್ಯಾಶನ್ ಶೋ ನಂತರ, ಅನುಷ್ಕಾ ಶರ್ಮಾ (ವಿವಾಹಕ್ಕಿಂತ ಮೊದಲು) ಮಾಧ್ಯಮಗಳೊಂದಿಗೆ ಸಂವಾದಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ನಟ ರಣವೀರ್ ಸಿಂಗ್ ಅಲ್ಲಿಗೆ ಬಂದು ಅವರ ಪರವಾಗಿ ಉತ್ತರವನ್ನು ನೀಡಿದ್ದರು. ನಂತರ, ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಆದರೆ ಅನುಷ್ಕಾ ರಿಯಾಕ್ಷನ್ ನೋಡಿದ್ರೆ ರಣವೀರ್ ಸಿಂಗ್ ಮಧ್ಯ ಬಂದಿದ್ದು ಇಷ್ಟವಿಲ್ಲದೆ ಇರುವುದು ತೋರುತ್ತಿದೆ.

ಶಿಲ್ಪಾ ಶೆಟ್ಟಿ – ರಿಚರ್ಡ್ ಗೇರೆ

ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳ ಅತ್ಯಂತ ಸುದ್ದಿಯಾಗಿದ್ದ ನಟಿ ಶಿಲ್ಪಾ ಶೆಟ್ಟಿಯನ್ನು ರಿಚರ್ಡ್ ಗೇರೆ ಅಪ್ಪಿಕೊಂಡಿದ್ದು. ಒಮ್ಮೆ, ಶಿಲ್ಪಾ ಅಮೆರಿಕನ್ ನಟ ಮತ್ತು ಮಾನವೀಯ ಕಾರ್ಯಕರ್ತ ರಿಚರ್ಡ್ ಗೇರೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಈ ವೇಳೆ ರಿಚರ್ಡ್ ಶಿಲ್ಪಾ ಶೆಟ್ಟಿಯನ್ನು ಎಳೆದು ಅಪ್ಪಿಕೊಂಡಿದ್ದಲ್ಲದೇ ಚುಂಬಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಶಾರುಖ್ ಖಾನ್, ವಿದ್ಯಾ ಬಾಲನ್

ಕೆಲವು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಹಾಲಿವುಡ್ ನಟ ಹಗ್ ಜಾಕ್‌ಮನ್ ಹಾಗೂ ನಟಿ ವಿದ್ಯಾ ಬಾಲನ್ ಜೊತೆ ಉಪಸ್ಥಿತರಿದ್ದರು. ಈ ವೇಳೆ ಶಾರುಖ್ ಹಾಗೂ ಹಗ್ ಜಾಕ್ಮನ್ ಇಬ್ಬರೂ ಒಂದೇ ಬಾರಿ ವಿದ್ಯಾರನ್ನು ತಬ್ಬಿಕೊಂಡಿದ್ದಾರೆ. ಈ ಫೋಟೋ ಕೂಡ ವೈರಲ್ ಆಗಿತ್ತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...