ಬೆಳಗಾವಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿದ ಪರಿಣಾಮ 50 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ನಡೆದಿದೆ.
ಕೆರೂರು ಗ್ರಾಮದಲ್ಲಿ ನಡೆದ ಜಾತ್ರೆಯೊಂದಕ್ಕೆ ಹಲವಾರು ಭಕ್ತರು ಆಗಮಿಸಿದ್ದರು. ಜಾತ್ರೆ ವೇಳೆ ಪ್ರಸಾದ ಸೇವಿಸಿದ ಪರಿಣಾಮ ವಾಂತಿ ಭೇದಿ ಕಾಣಿಸಿಕೊಂಡು 50 ಮಂದಿ ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥಗೊಂಡ 50 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಜಾತ್ರೆಯಲ್ಲಿ ನೀಡಿರುವ ಪ್ರಸಾದ ಕಲುಷಿತವಾಗಿತ್ತು ಎಂದು ಶಂಕಿಸಲಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಅಪ್ ಡೇಟ್ ಆಗಲಿದೆ.