alex Certify ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರತಿ ವರ್ಷ ಪ್ರಾಣ ಕಳೆದುಕೊಳ್ತಿದ್ದಾರೆ 38 ಲಕ್ಷಕ್ಕೂ ಹೆಚ್ಚು ಮಂದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರತಿ ವರ್ಷ ಪ್ರಾಣ ಕಳೆದುಕೊಳ್ತಿದ್ದಾರೆ 38 ಲಕ್ಷಕ್ಕೂ ಹೆಚ್ಚು ಮಂದಿ…!

ಫಂಗಲ್‌ ಮತ್ತು ಬ್ಯಾಕ್ಟೀರಿಯಾಗಳು ಮಾನವರ ದೇಹಕ್ಕೆ ಮಾರಕ. ಇವು ಪ್ರತಿವರ್ಷ 38 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ಎಂಬ ಆಘಾತಕಾರಿ ಅಂಶವೀಗ ಬಹಿರಂಗವಾಗಿದೆ. ಹೊಸದೊಂದು ಅಧ್ಯಯನದ ಪ್ರಕಾರ ಎಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ವಿರುದ್ಧದ ಹೋರಾಟದಲ್ಲಿ ಶಿಲೀಂಧ್ರ ರೋಗಕಾರಕಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಬ್ರಿಟನ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ, ಆಮ್‌ಸ್ಟರ್‌ಡ್ಯಾಮ್ ಮತ್ತು ನೆದರ್‌ಲ್ಯಾಂಡ್‌ನ ವೆಸ್ಟರ್‌ಡೈಕ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಇದರ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿರುವ ಹೆಚ್ಚಿನ ಶಿಲೀಂಧ್ರ ರೋಗಕಾರಕಗಳು ಈಗಾಗಲೇ ನಿರೋಧಕವಾಗಿರುತ್ತವೆ ಅಥವಾ ಆಂಟಿಫಂಗಲ್ ಔಷಧಿಗಳಿಗೆ ವೇಗವಾಗಿ ಪ್ರತಿರೋಧವನ್ನು ಅಭಿವೃದ್ಧಿಪಡಿಸುತ್ತಿವೆ.

ಅಧ್ಯಯನದ ಪ್ರಕಾರ ಈ ಶಿಲೀಂಧ್ರ ಬ್ಯಾಕ್ಟೀರಿಯಾಗಳಿಂದ ಪ್ರತಿ ವರ್ಷ ಸುಮಾರು 38 ಲಕ್ಷ ಜನರು ಸಾಯುತ್ತಾರೆ. ಹಾಗಾಗಿ AMR ಅನ್ನು ನಿಯಂತ್ರಿಸಲು ಶಿಲೀಂಧ್ರ ರೋಗಕಾರಕಗಳಲ್ಲಿ ಅಭಿವೃದ್ಧಿಪಡಿಸಿದ ಪ್ರತಿರೋಧವನ್ನು ಸೇರಿಸಲು ಮನವಿ ಮಾಡಲಾಗಿದೆ. ಆಸ್ಪರ್ಜಿಲಸ್, ಕ್ಯಾಂಡಿಡಾ, ನಕಾಸಿಯೋಮೈಸಸ್ ಗ್ಲಾಬ್ರಾಟಸ್ ಮತ್ತು ಟ್ರೈಕೊಫೈಟನ್ ಇಂಡೋಟಿನಿಯಂತಹ ಪ್ರಮುಖ ಶಿಲೀಂಧ್ರನಾಶಕ ನಿರೋಧಕ ಸೋಂಕುಗಳ ಬಗ್ಗೆ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಇವು ವಿಶೇಷವಾಗಿ ವಯಸ್ಸಾದವರಿಗೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಮಾರಕವಾಗಿವೆ. ಆಕ್ರಮಣಕಾರಿ ಶಿಲೀಂಧ್ರ ರೋಗಗಳು ಕಳೆದ ದಶಕಗಳಲ್ಲಿ ಅನೇಕ ಔಷಧ ನಿರೋಧಕ ಸಮಸ್ಯೆಗಳಿಗೆ ಕಾರಣವಾಗಿವೆ.

ಶಿಲೀಂಧ್ರ ಸೋಂಕಿನ ಲಕ್ಷಣಗಳು

ಶಿಲೀಂಧ್ರಗಳ ಸೋಂಕಿಗೆ ತುತ್ತಾದಾಗ ಸಾಮಾನ್ಯವಾಗಿ ಪೀಡಿತ ಪ್ರದೇಶದಲ್ಲಿ ತುರಿಕೆ, ನೋವು, ಕೆಂಪಗಾಗುವುದು ಅಥವಾ ದದ್ದು ಕಾಣಿಸಿಕೊಳ್ಳುವುದು ಸಾಮಾನ್ಯ. ಉಗುರುಗಳ ಬಣ್ಣ ಬದಲಾಗಬಹುದು. ಉಗುರು ದಪ್ಪವಾಗುತ್ತದೆ ಅಥವಾ ಒಡೆಯುತ್ತದೆ. ತಿನ್ನುವಾಗ ಬಾಯಿ ಅಥವಾ ಗಂಟಲಿನಲ್ಲಿ ನೋವಾಗುತ್ತದೆ. ರುಚಿಯ ನಷ್ಟ ಅಥವಾ ಚರ್ಮದ ಕೆಳಗೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...