ನವದೆಹಲಿ: ‘ರಕ್ತದಾನ ಅಮೃತ ಮಹೋತ್ಸವ’ದಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಶನಿವಾರ ಏಮ್ಸ್ ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಉದ್ದೇಶಿಸಿ ಮಾತನಾಡಿದ , ಅವರು ಅಮೃತ್ ಮಹೋತ್ಸವದ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ ಎಂದು ಹೇಳಿದರು.
ರಕ್ತದಾನ ಅಮೃತ ಮಹೋತ್ಸವವು ರಕ್ತದಾನ, ರಕ್ತ ವಿತರಣೆ ಮತ್ತು ರಕ್ತ ನಿರ್ವಹಣೆಯ ಗುರಿ ಹೊಂದಿದೆ. ಇದು ಸ್ವಯಂಪ್ರೇರಿತ ರಕ್ತದಾನಗಳ ಬಗ್ಗೆ ಜಾಗೃತಿ ಹೆಚ್ಚಿಸಲು ಸಹಾಯ ಮಾಡಿದೆ. ರಕ್ತ ಅಥವಾ ಅದರ ಘಟಕಗಳಾದ ಸಂಪೂರ್ಣ ರಕ್ತ, ಪ್ಯಾಕ್ ಮಾಡಿದ ಕೆಂಪು ರಕ್ತ ಕಣಗಳು, ಪ್ಲಾಸ್ಮಾ ಮತ್ತು ಪ್ಲೇಟ್ ಲೆಟ್ ಗಳು ಲಭ್ಯವಿದೆ, ರಕ್ತದಾನ ಅಮೃತ ಮಹೋತ್ಸವದ ಯಶಸ್ಸು ಮಾನವೀಯತೆ ಬಲಪಡಿಸಿದ್ದು, ಅನೇಕ ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.