alex Certify BIG NEWS: ಮೇ ತಿಂಗಳಿನಲ್ಲಿ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸಾಪ್ ಖಾತೆ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೇ ತಿಂಗಳಿನಲ್ಲಿ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸಾಪ್ ಖಾತೆ ನಿಷೇಧ

ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಒಂದು ಶಾಕಿಂಗ್ ಸುದ್ದಿ ನೀಡಿದೆ. ಕಂಪನಿಯ ಇತ್ತೀಚಿನ ಮಾಸಿಕ ವರದಿಯ ಪ್ರಕಾರ, ಮೆಟಾ ಒಡೆತನದ ವಾಟ್ಸಾಪ್ ತನ್ನ ಕುಂದುಕೊರತೆಗಳ ವ್ಯವಸ್ಥೆ ಮೂಲಕ ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಮೇ ತಿಂಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಭಾರತೀಯರ ಖಾತೆಗಳನ್ನು ನಿಷೇಧಿಸಿದೆ.

ಕಳೆದ ವರ್ಷ ಜಾರಿಗೆ ಬಂದ ಹೊಸ ಐಟಿ ನಿಯಮಗಳು ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ಅನುಸರಣೆ ವರದಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದೆ. ಇಂತಹ ಕಂಪನಿಗಳು ಸ್ವೀಕರಿಸಿದ ದೂರುಗಳ ವಿವರ ಮತ್ತು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಬೇಕಾಗುತ್ತದೆ.

ಫೋನ್ ಸಂಖ್ಯೆಯ ಮುನ್ನ ಕಾಣಿಸುವ +91 ಸಂಖ್ಯೆ ಮೂಲಕ ಭಾರತೀಯ ಖಾತೆಯನ್ನು ಗುರುತಿಸಲಾಗುತ್ತದೆ. ಶುಕ್ರವಾರ ಬಿಡುಗಡೆಯಾದ ವರದಿಯ ಪ್ರಕಾರ, ಮೇ 1 ರಿಂದ ಮೇ 31, 2022 ರ ನಡುವೆ 19.10 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ.

ದುರುಪಯೋಗ ಪತ್ತೆ ವಿಧಾನವನ್ನು ಬಳಸಿಕೊಂಡು ವಾಟ್ಸಾಪ್ ನಿಷೇಧ ಪ್ರಕ್ರಿಯೆ ನಡೆಸಿದೆ. ಏಪ್ರಿಲ್‌ನಲ್ಲಿ 16 ಲಕ್ಷ ಭಾರತೀಯ ಬಳಕೆದಾರರ ಖಾತೆಗಳನ್ನು ಮತ್ತು ಮಾರ್ಚ್‌ನಲ್ಲಿ 18.05 ಲಕ್ಷ ಖಾತೆಗಳನ್ನು ನಿಷೇಧಿಸಿದೆ.

ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ಸೈಂಟಿಸ್ಟ್ ಮತ್ತು ತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ದ್ವೇಷದ ಭಾಷಣ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಮೇಲೆ ಕಣ್ಣಿರಿಸಲು ಕ್ರಮಕೈಗೊಳ್ಳಬೇಕು.

ಈ ವಿಷಯದಲ್ಲಿ ಡಿಜಿಟಲ್ ಮಧ್ಯವರ್ತಿಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಲು ಮತ್ತು ಅವರ ಪ್ಲಾಟ್‌ಫಾರ್ಮ್‌ಗಳಲ್ಲಿ ಹೋಸ್ಟ್ ಮಾಡಲಾದ ವಿಷಯಕ್ಕೆ ಜವಾಬ್ದಾರರಾಗಲು ಸರ್ಕಾರ ಕಳೆದ ವರ್ಷ ಐಟಿ ನಿಯಮಗಳನ್ನು ಪ್ರಕಟಿಸಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...