ಜಿಂಬಾಬ್ವೆಯ ಚೆಗುಟು ಜಿಲ್ಲೆಯಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿದ್ದು, ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಶೋಧ ಮುಂದುವರಿಸಿವೆ.
ಚೆಗುಟುವಿನ ಬೇ ಹಾರ್ಸ್ ಗಣಿಯಲ್ಲಿ ಸುಮಾರು 42 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ನಂಬಲಾಗಿದೆ ಎಂದು ಪ್ರಾಂತೀಯ ಅಧಿಕಾರಿ ಮರಿಯನ್ ಚೋಂಬೊ ತಿಳಿಸಿದ್ದಾರೆ.
ಗಣಿಯಲ್ಲಿ ಇದುವರೆಗೆ 21 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 10 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು,, ಮೃತರ ಅಂತ್ಯಕ್ರಿಯೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಜಿಂಬಾಬ್ವೆಯ ಉಪಾಧ್ಯಕ್ಷ ಕಾನ್ಸ್ಟಾಂಟಿನೋ ಚಿವೆಂಗಾ ಹೇಳಿದ್ದಾರೆ
ಜಿಂಬಾಬ್ವೆಯ ಮಶೋನಾಲ್ಯಾಂಡ್ ಪಶ್ಚಿಮ ಪ್ರಾಂತ್ಯದಲ್ಲಿರುವ ಈ ಗಣಿಯು ಜಿಂಬಾಬ್ವೆ ರಾಜಧಾನಿ ಹರಾರೆಯಿಂದ ಪಶ್ಚಿಮಕ್ಕೆ 62 ಮೈಲಿ ದೂರದಲ್ಲಿದೆ. ಗಣಿಗಾರರು ಸುಮಾರು 150 ಮೀಟರ್ ಆಳದ ಗಣಿಯೊಳಗೆ ಹೋಗಿದ್ದರು ಎಂದು ಚೋಂಬೊ ಹೇಳಿದರು ಎಂದು ವರದಿ ತಿಳಿಸಿದೆ.