ಭಾರತದಲ್ಲಿ ಪುರುಷರು ಮೊದಲಿಗಿಂತ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
2019-21ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5ರಲ್ಲಿ ಈ ಅಂಶ ಪತ್ತೆಯಾಗಿದ್ದು, 15 ರಿಂದ 49 ವರ್ಷದೊಳಗಿನ ಪುರುಷರು ಹೆಚ್ಚು ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ.
15-49 ವಯಸ್ಸಿನ ಶೇ. 83.4 ಪುರುಷರು ಮತ್ತು ಶೇ. 70.6 ಮಹಿಳೆಯರು ಮಾಂಸಾಹಾರವನ್ನು ಪ್ರತಿದಿನ ಸೇವಿಸುತ್ತಾರೆ. ಅಂಡಮಾನ್ ಮತ್ತು ನಿಕೋಬಾರ್ (ಶೇ. 96.1), ಗೋವಾ (ಶೇ. 93.8), ಲಕ್ಷದ್ವೀಪ (ಶೇ. 98.4) ಮತ್ತು ಕೇರಳ (ಶೇ. 90.1) ಹೆಚ್ಚು ಮಾಂಸಾಹಾರ ಸೇವಿಸುವವರನ್ನು ಹೊಂದಿದ್ದರೆ, ರಾಜಸ್ಥಾನ (14.1 ಶೇ.), ಹರಿಯಾಣ (ಶೇ. 13.4), ಪಂಜಾಬ್ (ಶೇ. 17) ಮತ್ತು ಗುಜರಾತ್ (ಶೇ. 17.9) ಪಟ್ಟಿಯ ಕೆಳಭಾಗದಲ್ಲಿದೆ.