ಯುದ್ಧ ಅಂದ್ಮೇಲೆ ಅಲ್ಲಿ ಸಾವು-ನೋವು ಸಾಮಾನ್ಯ. ಆದರೆ ಭಾರತದಲ್ಲಿ ಯುದ್ಧಕ್ಕಿಂತಲೂ ಹೆಚ್ಚು ಜನರು ರಸ್ತೆ ಅಫಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ (ನಿವೃತ್ತ) ಜನರಲ್ ವಿ.ಕೆ. ಸಿಂಗ್ ಹೇಳಿದರು.
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ (ನಿವೃತ್ತ) ಜನರಲ್ ವಿ.ಕೆ.ಸಿಂಗ್ , ‘ರಸ್ತೆ ಸುರಕ್ಷತೆ‘ ಕುರಿತಾಗಿ ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 1.35 ಲಕ್ಷದಷ್ಟು ಜನರು ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿಅಂಶವನ್ನ ನೋಡಿದರೆ, ಇದು ಯುದ್ಧದಲ್ಲಿ ಮಡಿದವರ ಸಂಖ್ಯೆಗಿಂತಲೂ ಹೆಚ್ಚು ಎಂದರು.
SHOCKING NEWS: ಕಾರು ಅಡ್ಡಗಟ್ಟಿ 20 ಲಕ್ಷ ನಗದಿನೊಂದಿಗೆ ಕಾರು ಸಮೇತ ಎಸ್ಕೇಪ್ ಆದ ಖದೀಮರು ‘
ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ರಸ್ತೆ ಸುರಕ್ಷತೆಯಂತಹ ಪ್ರಮುಖ ವಿಷಯವನ್ನ ಕಡೆಗಣಿಸಲಾಗಿದೆ. ರಸ್ತೆ ಸುರಕ್ಷತಾ ಸಪ್ತಾಹ ಅನ್ನೊ ಕಾರ್ಯಕ್ರಮವನ್ನ ಈಗ ರಸ್ತೆ ಸುರಕ್ಷತಾ ಮಾಸ ಅಂತ ಮಾಡಿದ್ದೇವೆ. ಎಂದು ಅವರು ಹೇಳಿದರು.
ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2020ರಲ್ಲಿ ದೇಶದಲ್ಲಿ ಒಟ್ಟು 3,66,138 ರಸ್ತೆ ಅಪಘಾತ ಸಂಭವಿಸಿದ್ದು ಅದರಲ್ಲಿ 1,31,714 ಜನರು ಸಾವನ್ನಪ್ಪಿದ್ದಾರೆ. ಆದ ಕಾರಣ ರಸ್ತೆಯಲ್ಲಿ ಸಂಭವಿಸೋ ದುರ್ಘಟನೆಗಳನ್ನ ತಪ್ಪಿಸಲು ಸರ್ಕಾರ ಇನ್ನೂ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಈಗ ಇಂಜಿನಿಯರ್ಗಳಿಗೂ ರಸ್ತೆಗುಣಮಟ್ಟದಲ್ಲಿ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲು ಹೇಳಿದೆ.