alex Certify ಮಂಡ್ಯದಲ್ಲಿ ನೈತಿಕ ಪೊಲೀಸ್ ಗಿರಿ; ಡಿಜೆಗೆ ಡಾನ್ಸ್‌ ಮಾಡಿದ್ದ ಯುವಕರಿಗೆ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡ್ಯದಲ್ಲಿ ನೈತಿಕ ಪೊಲೀಸ್ ಗಿರಿ; ಡಿಜೆಗೆ ಡಾನ್ಸ್‌ ಮಾಡಿದ್ದ ಯುವಕರಿಗೆ ಥಳಿತ

ಮಂಡ್ಯದಲ್ಲಿ ಅಮಾನುಷ ನೈತಿಕ ಪೊಲೀಸ್​ಗಿರಿ-ಯುವಕರ ಕೈಕಾಲು ಕಟ್ಟಿ ಮನಸೋ ಇಚ್ಛೆ ಥಳಿತ..

ಮಂಡ್ಯ: ಗಣಪತಿ ಹಬ್ಬದಲ್ಲಿ ಡಿಜೆ‌ ಹಾಕಿದ ವಿಚಾರವಾಗಿ ಯುವಕರಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಪಿ.ಬಿ. ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ಮುತ್ತುರಾಜ್, ವಿನಯ್, ದರ್ಶನ್, ದೊರೆ, ಧರ್ಮರಾಜ್, ಅಮಿತ್ ಎಂಬ ಯುವಕರನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ನಾಲ್ಕು ದಿನದ ಹಿಂದೆ ನಡೆದಿದೆ.

ಹೌದು, ಈ ಯುವಕರು ಗಣೇಶ ವಿಸರ್ಜನೆ ವೇಳೆ ಡಿ.ಜೆ. ಹಾಕಿಕೊಂಡು ಕುಣಿಯುತ್ತಿದ್ದರಂತೆ. ಈ ವೇಳೆ ಡಿಜೆ ಆಫ್ ಮಾಡಿ ಎಂದು ರಾಜ್ಯ ರೈತ ಸಂಘದ ಮಾಜಿ ತಾಲೂಕು ಅಧ್ಯಕ್ಷ ನಾಗೇಗೌಡ ಹೇಳಿದ್ದಾರೆ.

ಆದರೆ ಆ ಯುವಕರು ಡಿಜೆ ಹಾಕಿಕೊಂಡು ಕುಣಿಯುತ್ತಾ ಗಣೇಶ ವಿಸರ್ಜನೆ ಮಾಡಿ ಬಂದಿದ್ದಾರೆ. ಇದಾದ ಬಳಿಕ ನಾಗೇಗೌಡ ಈ ಯುವಕರನ್ನು ಮನೆಗೆ ಕರೆಸಿದ್ದರಂತೆ.

ಮನೆಗೆ ಕರೆಸಿ ಮಾತುಕತೆ ಮಾಡುವಾಗ ಇವರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಈ ಯುವಕರನ್ನು ಕಟ್ಟಿ ಹಾಕಿ ಅವಾಚ್ಯ ಶಬ್ದದಿಂದ ಬೈಯ್ಯೋದರ ಜೊತೆಗೆ ಮನ ಬಂದಂತೆ ಥಳಿಸಿದ್ದಾರೆ.

ಥಳಿಸುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅಷ್ಟೆ ಅಲ್ಲ ಈ ವಿಡಿಯೋವನ್ನು ಯುವಕರು ಪೊಲೀಸರಿಗೆ ಕೊಟ್ಟು ಕಂಪ್ಲೇಂಟ್ ಕೊಟ್ಟಿದ್ದಾರೆ. ಯುವಕರ ದೂರಿನನ್ವಯ ನಾಗೇಗೌಡ ಹಾಗೂ ಥಳಿಸಿದವರನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...