
ಬೆಳಗಾವಿ: ಬೆಳಗಾವಿಯಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ರಸ್ಟ್ ಸಿಕ್ಕಿದೆ. ನಿನ್ನೆ ಕೋಟೆ ಕೆರೆ ಬಳಿ ಯುವನಿಧಿಗೆ ಅರ್ಜಿ ಸಲ್ಲಿಸಲು ಬಂದಿದ್ದ ಯುವಕ, ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ.
ಚಿಕ್ಕಮ್ಮನ ಮಗ ಸಚಿನ್ ಜೊತೆಗೆ ಯುವತಿ ಬಂದಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದ. ಇವರು ಅನ್ಯಕೋಮಿನ ಪ್ರೇಮಿಗಳು ಎಂದು ತಿಳಿದು ಹಲ್ಲೆ ನಡೆಸಲಾಗಿದೆ.
ಅರ್ಜಿ ಸಲ್ಲಿಸಲು ಬಂದ ವೇಳೆ ಸರ್ವರ್ ಸಮಸ್ಯೆ ಇದ್ದ ಕಾರಣ ಕೆರೆ ಬಳಿ ಜೋಡಿ ನಿಂತಿದ್ದಾಗ 15ಕ್ಕೂ ಹೆಚ್ಚು ಪುಂಡರು ದಾಳಿ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.