
ಬೆಳಗಾವಿ: ನಗರದ ಕಿಲ್ಲಾ ಕೆರೆ ಬಳಿ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಗೌಂಡವಾಡ ಗ್ರಾಮದ ಸಚಿನ್(22), ಮುಸ್ಕಾನ್(23) ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಅರ್ಜಿ ಸಲ್ಲಿಸಲು ಬಂದ ವೇಳೆ ಸರ್ವರ್ ಸಮಸ್ಯೆ ಇದ್ದ ಕಾರಣ ಕೆರೆ ಬಳಿ ಜೋಡಿ ನಿಂತಿದ್ದಾಗ 15ಕ್ಕೂ ಹೆಚ್ಚು ಪುಂಡರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಸಚಿನ್ ಲಮಾಣಿ ಮತ್ತು ಮುಸ್ಕಾನ್ ಪಟೇಲ್ ಅವರ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ.
ಕೆರೆ ಬಳಿ ನಿಂತಿದ್ದ ಜೋಡಿಯನ್ನು ಬಲವಂತವಾಗಿ ಅಲ್ಲೇ ಇದ್ದ ರೂಂವೊಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ಕೂಡಿಹಾಕಿ ಹಲ್ಲೆ ನಡೆಸಲಾಗಿದೆ. ಮೂರು ಗಂಟೆಗಳ ಕಾಲ ನಿರಂತರವಾಗಿ ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಬಳಿಕ ಯುವತಿ ಪೋಷಕರಿಂದ 112ಕ್ಕೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಲೊಕೇಶನ್ ಟ್ರೇಸ್ ಮಾಡಿದ ಪೊಲೀಸರು ಇಬ್ಬರನ್ನು ರಕ್ಷಿಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.