alex Certify ಪತಿ ಬಿಟ್ಟು ಪ್ರೇಮಿ ಜೊತೆ ಹೋದವಳಿಗೆ 8 ತಿಂಗಳ ನಂತ್ರ ಮತ್ತೆ ನೆನಪಾಯ್ತು ಮಗಳು, ಪತಿಯ ಪ್ರೀತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಬಿಟ್ಟು ಪ್ರೇಮಿ ಜೊತೆ ಹೋದವಳಿಗೆ 8 ತಿಂಗಳ ನಂತ್ರ ಮತ್ತೆ ನೆನಪಾಯ್ತು ಮಗಳು, ಪತಿಯ ಪ್ರೀತಿ…!

ಯಾರನ್ನು ಮರೆತ್ರೂ ಮಕ್ಕಳನ್ನು ಮರೆಯಲು ತಾಯಿಗೆ ಸಾಧ್ಯವಿಲ್ಲ. ಅನೇಕ ದಿನಗಳವರೆಗೆ ತಾಯಿ ಮಕ್ಕಳಿಂದ ದೂರವಿರುವುದಿಲ್ಲ. ಪ್ರೀತಿಗಾಗಿ ಮಗಳನ್ನು ತೊರೆದು ಹೋದ ಯುಪಿಯ ಮೊರಾದಾಬಾದ್ ಮಹಿಳೆಗೂ ತನ್ನ ಮಗಳ ನೆನಪಾಗಿದೆ. ಇದು ದೊಡ್ಡ ಗಲಾಟೆಗೆ ಕಾರಣವಾಗಿದೆ.

ಮಹಿಳೆಗೆ ಐದು ವರ್ಷಗಳ ಹಿಂದೆ ಅದೇ ಗ್ರಾಮದ ಯುವಕನ ಜೊತೆ ಮದುವೆಯಾಗಿತ್ತಂತೆ. ಹೆಣ್ಣು ಮಗುವಿನ ತಾಯಿಯಾದ ಮಹಿಳೆ ಸಂಸಾರದಲ್ಲಿ ಬಿರುಕು ಮೂಡಿದ್ದು ಆಕೆ ಪ್ರೇಮಿಯಿಂದ. ಆಗಾಗ ಮಹಿಳೆ ತನ್ನ ಪ್ರೇಮಿಗೆ ಕರೆ ಮಾಡ್ತಿದ್ದಳಂತೆ. ಇದು ಪತಿಗೆ ತಿಳಿದಿದೆ. ಪತಿ, ವಿಚಾರಿಸಿದಾಗ ಪತ್ನಿ ,ಹಳೆ ಪ್ರೇಮಿ ವಿಷ್ಯ ಹೇಳಿದ್ದಾಳೆ. ಮದುವೆಗಿಂತ ಮೊದಲು ಆತನನ್ನು ಪ್ರೀತಿಸುತ್ತಿದ್ದೆ ಎಂದಿದ್ದಾಳೆ. ಇಬ್ಬರನ್ನು ಒಂದು ಮಾಡುವ ನಿರ್ಧಾರಕ್ಕೆ ಬಂದ ಪತಿ, ಪತ್ನಿಯಿಂದ ದೂರವಾಗಿದ್ದಾನೆ.

ಪತ್ನಿಯನ್ನು ಪ್ರೇಮಿ ಬಳಿ ಬಿಟ್ಟು, ಆಕೆ ಜೊತೆ ಸಂಬಂಧ ಕಡಿದುಕೊಂಡಿದ್ದಾನೆ. ಈ ಘಟನೆ ನಡೆದು 8 ತಿಂಗಳ ನಂತ್ರ, ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರೇಮಿ ತನಗೆ ಹೊಡೆಯುತ್ತಾನೆಂದು ಆಕೆ ದೂರಿದ್ದಾಳೆ. ಮಹಿಳೆ, ತನ್ನ ಮಾಜಿ ಪತಿಗೆ ಕರೆ ಮಾಡ್ತಿದ್ದಳಂತೆ. ಇದು ಪ್ರೇಮಿಗೆ ಗೊತ್ತಾಗಿದೆ. ಮಗಳ ಜೊತೆ ಮಾತನಾಡಲು ಪತಿಗೆ ಕರೆ ಮಾಡಿದ್ದೆ ಎಂದು ಹೇಳಿದ್ದಾಳೆ. ಆದ್ರೆ ಇದ್ರಿಂದ ಕೋಪಗೊಂಡ ಪ್ರೇಮಿ, ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. ಪ್ರಕರಣ ಎಸ್ಪಿ ಕಚೇರಿ ತಲುಪಿದೆ. ಅಲ್ಲಿ ಇಬ್ಬರಿಗೂ ಕೌನ್ಸಲಿಂಗ್ ಮಾಡಲಾಗಿದೆ. ಕೌನ್ಸಲಿಂಗ್ ನಂತ್ರ ಪ್ರೇಮಿ ಜೊತೆ ಇರಲು ಮಹಿಳೆ ಒಪ್ಪಿದ್ದಾಳೆ. ಗಂಡನಿಗೆ ಕರೆ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...