alex Certify ʼಚಂದ್ರʼನಲ್ಲಿರುವ ಆಮ್ಲಜನಕದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಂದ್ರʼನಲ್ಲಿರುವ ಆಮ್ಲಜನಕದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ

ಚಂದ್ರಲೋಕಕ್ಕೆ ಮಾನವ ಕಾಲಿಟ್ಟು 50 ವರ್ಷ ಸಂದಿದೆ. ಇನ್ನೂ ಕೂಡ ಚಂದ್ರ ಗ್ರಹದ ಬಗ್ಗೆ ಅನ್ವೇಷಣೆಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಮಹತ್ವದ ಅಂಶ ಹೊರಬಂದಿದೆ. ಚಂದ್ರನಲ್ಲಿ ಸುಮಾರು 100,000 ವರ್ಷಗಳವರೆಗೆ ಬೇಕಾಗುವಷ್ಟು ಪ್ರಮಾಣದ ಆಮ್ಲಜನಕವಿದೆ ಎಂದು ಅಧ್ಯಯನ ತಿಳಿಸಿದೆ. ಸುಮಾರು 8 ಶತಕೋಟಿ ಜನರಿಗೆ ಈ ಆಮ್ಲಜನಕ ಉಪಯೋಗವಾಗುತ್ತದೆ ಎಂದು ತಿಳಿಸಿದೆ.

ಚಂದ್ರನ ಮೇಲಿನ ಬಂಡೆಗಳ ಪದರವನ್ನು ರೆಗೊಲಿತ್ ಎಂದು ಕರೆಯಲಾಗುತ್ತದೆ. ಇದು ಹೇರಳವಾದ ಆಮ್ಲಜನಕವನ್ನು ಹೊಂದಿದೆ. ಆದರೆ, ಚಂದ್ರನ ಮೇಲ್ಮೈಯಲ್ಲಿರುವ ಈ ಆಮ್ಲಜನಕವು ಇನ್ನೂ ಅನಿಲ ರೂಪದಲ್ಲಿಲ್ಲ. ಹೀಗಾಗಿ ರೆಗೋಲಿತ್‌ನಿಂದ ಆಮ್ಲಜನಕವನ್ನು ಹೊರತೆಗೆಯುವ ಮಾರ್ಗಗಳ ಬಗ್ಗೆ ಸಂಶೋಧಕರು ಅನ್ವೇಷಣೆ ನಡೆಸುತ್ತಿದ್ದಾರೆ.

ಬಳಸಬಹುದಾದ ಆಮ್ಲಜನಕವನ್ನು ಚಂದ್ರನ ಮೇಲಿನ ಪದರದಿಂದ ಹೊರತೆಗೆಯಬಹುದು. ನಂತರ ಇದನ್ನು ಮಾನವನ ಉಪಯೋಗಕ್ಕಾಗಿ ಬಳಸಬಹುದು ಎಂದು ವರದಿ ಹೇಳಿದೆ. ಇನ್ನೊಂದು ವರದಿ ಪ್ರಕಾರ, ಚಂದ್ರನ ಮೇಲ್ಮೈ ಪದರವು 41-45 ಪ್ರತಿಶತ ಆಮ್ಲಜನಕದಿಂದ ಮಾಡಲ್ಪಟ್ಟಿದೆ. ಆದರೆ. ಸಿಲಿಕಾ, ಅಲ್ಯೂಮಿನಿಯಂ, ಕಬ್ಬಿಣದಂತಹ ಖನಿಜಗಳನ್ನು ಒಳಗೊಂಡಿರುವ ರೆಗೋಲಿತ್‌ನೊಳಗೆ ಸೇರಿಕೊಂಡಿದೆ ಎಂದು ಹೇಳಲಾಗಿದೆ.

ವಿದ್ಯುದ್ವಿಭಜನೆಯ ಪ್ರಕ್ರಿಯೆಯನ್ನು ಬಳಸಿಕೊಂಡು ಈ ಖನಿಜಗಳಿಂದ ಬಳಸಬಹುದಾದ ಆಮ್ಲಜನಕವನ್ನು ಹೊರತೆಗೆಯಬಹುದು ಎಂದು ವರದಿಯು ಪ್ರತಿಪಾದಿಸುತ್ತದೆ. ಭೂಮಿಯ ಮೇಲೆ, ಆಮ್ಲಜನಕದಿಂದ ಅಲ್ಯೂಮಿನಿಯಂ ಅನ್ನು ಪ್ರತ್ಯೇಕಿಸಲು ವಿದ್ಯುದ್ವಿಭಜನೆಯನ್ನು ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಆಮ್ಲಜನಕವು ಉಪಉತ್ಪನ್ನವಾಗಿದೆ. ಆದರೆ, ಚಂದ್ರನ ಮೇಲ್ಮೈನಲ್ಲಿರುವ ಆಮ್ಲಜನಕವು ಮುಖ್ಯ ಉತ್ಪನ್ನವಾಗಿದೆ.

ಬೆಲ್ಜಿಯಂ ಮೂಲದ ಸ್ಟಾರ್ಟಪ್ ಸ್ಪೇಸ್ ಅಪ್ಲಿಕೇಷನ್ಸ್ ಸರ್ವಿಸಸ್, ಈ ವರ್ಷದಾರಂಭದಲ್ಲಿ, ವಿದ್ಯುದ್ವಿಭಜನೆಯ ಮೂಲಕ ಆಮ್ಲಜನಕವನ್ನು ತಯಾರಿಸುವ ಪ್ರಕ್ರಿಯೆಯನ್ನು ನವೀಕರಿಸುವ ಮೂರು ಪ್ರಾಯೋಗಿಕ ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದೆ.

ಚಂದ್ರನ ಮೇಲ್ಮೈಯಿಂದ ಬಳಸಬಹುದಾದ ಆಮ್ಲಜನಕವನ್ನು ಹೊರತೆಗೆಯಲು ವಿಜ್ಞಾನಿಗಳು ಸಂಶೋಧಿಸಿದರೆ, ಜನರಿಗೆ ಸಾಕಷ್ಟು ಆಮ್ಲಜನಕವನ್ನು ಒದಗಿಸುತ್ತದೆ ಎಂದು ವರದಿ ಹೇಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...