
ಎಲ್ಲಾ ಬಾಹ್ಯಾಕಾಶ ಉತ್ಸಾಹಿಗಳಿಗೆ ಮತ್ತು ಪ್ರಯಾಣಿಕರಿಗೆ ಸಿಹಿ ಸುದ್ದಿ. ಈಗ ನೀವು ಚಂದ್ರನ ಮೇಲೆ ಇಳಿಯಲು ಬಾಹ್ಯಾಕಾಶಕ್ಕೆ ಭೇಟಿ ನೀಡುವ ಅಗತ್ಯವಿಲ್ಲ. ದುಬೈನಲ್ಲಿ ಚಂದ್ರನು ಭೂಮಿಯ ಮೇಲೆಯೇ ಇರುತ್ತಾನೆ. ಈ ಪ್ರಪಂಚದ ಹೊರಗಿನ ಅನುಭವಕ್ಕಾಗಿ ಇಳೆಯ ಮೇಲೇ ಶಶಿಯನ್ನು ಕಾಣಬಹುದು.
ಕೆನಡಾದ ಆರ್ಕಿಟೆಕ್ಚರಲ್ ಕಂಪನಿ ಮತ್ತು ಇಂಟಲೆಕ್ಚುಯಲ್ ಪ್ರಾಪರ್ಟಿ ಲೈಸೆನ್ಸರ್ ಮೂನ್ ವರ್ಲ್ಡ್ ರೆಸಾರ್ಟ್ಸ್ ಇಂಕ್. (MWR) ‘ಮೂನ್ ದುಬೈ’ ಅನ್ನು ನಿರ್ಮಿಸಲು ಯೋಜಿಸಿದೆ. ಇದು $5 ಬಿಲಿಯನ್ ವೆಚ್ಚದಲ್ಲಿನ ಡೆಸ್ಟಿನೇಷನ್ ರೆಸಾರ್ಟ್ ಆಗಿದ್ದು ವಾರ್ಷಿಕವಾಗಿ 2.5 ಮಿಲಿಯನ್ ಅತಿಥಿಗಳನ್ನು ರೆಸಾರ್ಟ್ ಗೆ ಭೇಟಿ ನೀಡುವಂತೆ ಮಾಡುವ ಯೋಜನೆಯಾಗಿದೆ.
ಸಾಂಡ್ರಾ ಜಿ. ಮ್ಯಾಥ್ಯೂಸ್ ಮತ್ತು ಮೈಕೆಲ್ ಆರ್. ಹೆಂಡರ್ಸನ್ ಅವರು ಚಂದ್ರನ ಆಕಾರದ ರೆಸಾರ್ಟ್ ಅನ್ನು ಪ್ರಸ್ತಾಪಿಸಿ ಸ್ಥಾಪಿಸುತ್ತಿದ್ದಾರೆ. ದುಬೈನಲ್ಲಿನ 30 ಮೀಟರ್ (100-ಅಡಿ) ಕಟ್ಟಡದ ಮೇಲೆ ಚಂದ್ರನ 274 ಮೀಟರ್ (900-ಅಡಿ) ಪ್ರತಿಕೃತಿಯನ್ನ 48 ತಿಂಗಳಲ್ಲಿ ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ.
ಚಂದ್ರನ ಪ್ರತಿಕೃತಿಯು ಪೀಠದಂತಹ ವೃತ್ತಾಕಾರದ ಕಟ್ಟಡದ ಮೇಲೆ ಕುಳಿತಿರುವಂತೆ ಕಾಣುತ್ತದೆ. ಇದು ಈಗಾಗಲೇ ವಿಶ್ವದ ಅತಿ ಎತ್ತರದ ಕಟ್ಟಡ ಮತ್ತು ಇತರ ವಾಸ್ತುಶಿಲ್ಪದ ಅದ್ಭುತಗಳಿಗೆ ನೆಲೆಯಾಗಿದೆ. ಈ ಪ್ರತಿಕೃತಿ ದುಬೈನಲ್ಲಿ ರಾತ್ರಿವೇಳೆ ಹೊಳೆಯುತ್ತಿರುತ್ತದೆ.
ಹೆಂಡರ್ಸನ್ ಪ್ರಸ್ತಾಪಿಸಿದ ಯೋಜನೆಯು ಗೋಲಾಕಾರದ ರಚನೆಯೊಳಗೆ ರೆಸಾರ್ಟ್ ಅನ್ನು ಒಳಗೊಂಡಿದೆ. ಇದು 4,000 ಕೋಣೆಗಳ ಹೋಟೆಲ್ ಆಗಿದ್ದು 10,000 ಜನರಿಗೆ ಆತಿಥ್ಯ ನೀಡುವ ಸಾಮರ್ಥ್ಯ ಹೊಂದಿದೆ.